ಮಗನನ್ನು ಕಳೆದುಕೊಂಡ ದುಃಖ್ಖ ಮತ್ತು ಅವನ ಆ ಕ್ರೂರ ಸಾವಿಗೆ ಕಾರಣ ಅದವರ ಮೇಲಿನ ಕೋಪ ಇವೆರಡು ಸದಾ ಕಾಲ ಅವರ ಮನಸ್ಸನ್ನು ಕೊರೆಯುತಿತ್ತು. ಹೀಗೆ ವರುಷಗಳು ಉರುಳುತಿದ್ದವು. ಮರುದೇವಿಯವರು ದೊಡ್ಡ ಮಗಳು ಸರಸ್ವತಿಯನ್ನು ಅಟ್ಲೊಟ್ಟು ಮನೆತನದ ಅನಂತಯ್ಯ ಹೆಗ್ಡೆಯವರಿಗೆ ವಿವಾಹ ಮಾಡಿ ಕೊಟ್ಟರು. ಮರುವರ್ಷವೇ ಸಣ್ಣ ಮಗಳು ಸುನಂದಳನ್ನು ಆಕೆಯ ಹದಿನಾರನೇ ವಯಸ್ಸಿನಲ್ಲಿ ಬಂಗಾಡಿ ಎಂಬಲ್ಲಿಯ ಮೆಚ್ಚಿಲಗುತ್ತು ಮನೆಯ ದೊಡ್ಡ ಜಮೀನುದಾರ ನಾಗರಾಜ ಆರಿಗರಿಗೆ ವಿವಾಹ ಮಾಡಿಕೊಟ್ಟರು. ನಾಗರಾಜ ಆರಿಗರಿಗೆ ಮೂರನೇ ಮದುವೆ ಮೊದಲೆರಡು ಹೆಂಡತಿಯರು ಮದುವೆಯಾಗಿ ಒಂದೇ ವರ್ಷದಲ್ಲಿ ಗರ್ಭಿಣಿಯರಾಗಿ ಪ್ರಸವ ಸಮಯದಲ್ಲಿ ತೀರಿಕೊಂಡಿದ್ದರು. ಮರುದೇವಿಯವರು, ದೇವರಾಜರ ಒತ್ತಾಯದ ಮೆರೆಗೆ ಈ ಮದುವೆಗೆ ಒಪ್ಪಿಕೊಂಡಿದ್ದರು. ಕೇವಲ ಆಸ್ತಿ ಇದೆ ಎಂದು ಸುಂದರಿಯಾದ, ಹದಿನಾರರ ಹರೆಯದ, ಹುಡುಗಿಯನ್ನು ಮೂರನೇ ಮದುವೆ ಆಗುವ ವರನಿಗೆ ಕೊಡುತ್ತಿದ್ದಾರೆ ಎಂದು ಅವತ್ತು ಊರವರು ಮಾತನಾಡಿ ಕೊಳ್ಳುತ್ತಿದ್ದರಂತೆ. ಮದುವೆಯ ದಿನ ನೆರೆಯ ಮಹಿಳೆಯೊಬ್ಬಳು ಮಧು ಮಗಳನ್ನು ನೋಡಲು ಬಂದವಳು. " ಜೈನರು ಆಸ್ತಿಯೊಂದು ಇದ್ದರೆ, ಹುಲಿಗೂ ಹೆಣ್ಣು ಕೊಡುತ್ತಾರೆ" ಎಂದಿದ್ದಳಂತೆ. ಮುಂದೆ ಒಬ್ಬಂಟಿಯಾದ ಮರುದೇವಿಯವರು, ಅಳಿಯ ನಾಗರಾಜ ಅರಿಗರ ಒತ್ತಾಯಕ್ಕೆ ಮಣಿದು. ಮಗಳ ಮನೆಯಾದ ಬಂಗಾಡಿಯ ಮೆಚ್ಚಿಲದಲ್ಲಿ...
#Ontinavika ಒಂಟಿ ನಾವಿಕ | #ಕನ್ನಡ • #ತುಳು ಸಾಹಿತ್ಯ #poems #stories #books #kannada #tulu