ಮದುವೆ ಮನೆಯಲ್ಲಿ ನಡೆದ ಕಥೆಯನ್ನು ಕಮಲಕ್ಕ ಮರುದೇವಿ ಅವರಲ್ಲಿ, ವಿವರಿಸುತ್ತಿದ್ದಾರೆ....
ಶಾಂತಿರಾಜರನ್ನು ಗೋಣಿಚೀಲದಲ್ಲಿ ತುಂಬಿಸಿದ ಆ ಪುಂಡ ಯುವಕರು, ಅಡಿಗೆ ಕೋಣೆಯ ಅಟ್ಟದಲ್ಲಿ ಅಂದರೆ ಆ ಕಾಲದಲ್ಲಿ ಬಿತ್ತನೆಗೆ ಬೀಜಗಳನ್ನು ಮತ್ತು ಹಪ್ಪಳ, ಸೆಂಡಿಗೆ ಉಪ್ಪಿನಕಾಯಿ ಮುಂತಾದವುಗಳನ್ನು ಶೇಕರಿಸಿಡುವ, ಚೆನ್ನಾಗಿ ಹೊಗೆಯಾಡುವ ಉಪ್ಪರಿಗೆಯ ಕೋಣೆ, ಅಡಿಗೆ ಕೋಣೆಯ ಮಾಳಿಗೆ, ಆ ಸ್ಥಳದಲ್ಲಿ ಯಾರು ಕೂಡ ಸ್ವಲ್ಪ ಹೊತ್ತು ನಿಂತರೆ, ದಟ್ಟವಾದ ಹೊಗೆಗೆ ಉಸಿರು ಕಟ್ಟುತ್ತದೆ, ಮತ್ತು ಕಣ್ಣು ಉರಿಯುತ್ತದೆ. ಅಂತಹ ಜಾಗದಲ್ಲಿ 'ಶಾಂತಿ'ಯನ್ನು ಗೋಣಿಚೀಲದಲ್ಲಿ ಕಟ್ಟಿ ಹಾಕಿದ್ದಾರೆ.
ಹೀಗೆ ಕಟ್ಟಿ ಹಾಕಿದ ಪುಂಡ ಯುವಕರ ತಂಡ, ಜೋರಾಗಿ ನಗುತ್ತಾ, ಕಿರುಚಾಡುತ್ತ ಎಲ್ಲರಿಗೂ ತಮಾಷೆ ಮಾಡುತ್ತಾ, ಚೇಷ್ಟೆ ಮಾಡುತ್ತಾ ಇತ್ತು.
ಚೆನ್ನಾಗಿ ಬೆಳಗ್ಗಿನ ತಿಂಡಿ ತಿಂದು ಹೊಟ್ಟೆ ತುಂಬಿಸಿ ಕೊಂಡು ಊರು ಸುತ್ತಲು, ನದಿಯಲ್ಲಿ ಈಜಾಡಿ ಮೋಜು ಮಸ್ತಿ ಮಾಡಲು ಹೊರಟು ಹೋಯಿತು.
ಇತ್ತ, ಅಡಿಗೆ ಮನೆಯ ಉಪ್ಪರಿಗೆಯಲ್ಲಿ ದಟ್ಟವಾದ ಹೊಗೆ ಆವರಿಸುತ್ತಿದೆ ಶಾಂತಿರಾಜನಿಗೆ ಉಸಿರಾಡಲು ವಿಪರೀತ ಕಷ್ಟ ಆಗಿರಬಹುದು. ಕಣ್ಣನ್ನು ಬಿಗಿಯಾಗಿ ಮುಚ್ಚಿಕೊಂಡರೂ ಕೂಡ ಆ ಉರಿ ಬಿಸಿ ಹೊಗೆಯನ್ನೇ ಉಸಿರಾಡ ಬೇಕು. ಉಸಿರಾಡಲು ಅಲ್ಲಿ ಶುದ್ಧ ಗಾಳಿಯ ಲವಲೇಷವೂ ಇಲ್ಲ. ವಿಪರೀತ ಬೆವರಿರ ಬಹುದು, ಬಾರಿ ಸುಸ್ತಿನಿಂದ, ಕೆಮ್ಮುತ್ತಾ ಕೆಮ್ಮುತ್ತಾ ಪ್ರಾಣ ವೇದನೆ ತಡೆಯಲಾರದೆ "ಶಾಂತಿ" ಮೂರ್ಛೆ ಹೋಗಿಬಿಟ್ಟ.
ಹಾಗೆ ಎಷ್ಟು ಹೊತ್ತು ಕಳೆದುಹೋಯಿತೊ ಗೊತ್ತಿಲ್ಲ . ಉಸಿರು ಕಟ್ಟಿ ಮೂರ್ಛೆ ಹೋಗಿದ್ದಾನೆ.
ಹೀಗೆ ಕಮಲಕ್ಕ ಅಂದಿನ ಸನ್ನಿವೇಶವನ್ನು ವಿವರಿಸುತ್ತಿದ್ದಾರೆ.
"ಆತನನ್ನು ಕಟ್ಟಿಹಾಕಿದ್ದು, ಎಲ್ಲರಿಗೂ ತಿಳಿದಿದ್ದರು, ಅಲ್ಲಿಯೇ ಬಿಟ್ಟಿದ್ದಾರೆ, ಅನ್ನುವ ವಿಷಯ ಮಧುಮಗಳು ಸೇರಿದಂತೆ, ಆ ಮನೆಯ ಮಹಿಳೆಯರಿಗೆ ಗೊತ್ತಿತ್ತೋ ಇಲ್ಲವೋ , ಆದರೆ ನನಗೆ ಮಾತ್ರ ಗೊತ್ತಿರಲಿಲ್ಲ ಅಕ್ಕಾ," ಎಂದು ಕಮಲಕ್ಕ ಅಳುತ್ತಾ ಕಥೆ ಹೇಳುತ್ತಿದ್ದಾರೆ.
( ಮುಂದುವರಿಯುತ್ತದೆ)
ಕಾಮೆಂಟ್‌ಗಳು