ತನ್ನ ಪ್ರೀತಿಯ ಪುತ್ರ.
ತನ್ನ ಕರುಳ ಕುಡಿ, ನಮ್ಮ ಕುಟುಂಬದ ವಾರಸುದಾರನಾಗಬೇಕಿದ್ದವನ ಕ್ರೂರ ಸಾವಿನ ಕಠೋರ ಸತ್ಯವನ್ನು ಅರಗಿಸಿಕೊಳ್ಳಲು ಮರುದೇವಿಯವರಿಗೆ ಸಾಧ್ಯವಾಗುತ್ತಿಲ್ಲ.
ತನ್ನ ಕಂದನ ಸಾವಿಗೆ ಕಾರಣರಾದವರು ಎಷ್ಟೇ ದೊಡ್ಡ ವ್ಯಕ್ತಿಗಳಾದರು ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ನಿರ್ಧರಿಸಿದರು. ಈ ಸಾವಿನ ಬಗ್ಗೆ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚಿಸಬೇಕು ಎಂದು ಜಿಲ್ಲಾ ಮ್ಯಾಜಿಸ್ಟೇಟರ್ ಅವರಿಗೆ ಒಂದು ಸುದೀರ್ಘವಾದ ದೂರು ಪತ್ರ ಬರೆದು ರೆಡಿ ಮಾಡಿದರು.
ನಾಳೆಯ ದಿನ ಮಂಗಳೂರಿಗೆ ಮ್ಯಾಜಿಸ್ಟೇಟರ್ ಕಛೇರಿಗೆ ಹೋಗಿ ಅವರನ್ನು ಮುಖತಃ ಭೇಟಿಯಾಗಿ, ಲಿಖಿತವಾಗಿ ಬರೆದ ದೂರನ್ನು ಕೊಡಬೇಕು ಎಂದು ನಿರ್ಧರಿಸಿದರು.
ಮರುದಿನ ತಾನೊಬ್ಬಳೇ ಹೋಗುವ ಬದಲು ತನ್ನ ಅಕ್ಕನ ಮಗ ದೇವರಾಜ ಬಂಗನನ್ನು ಜೊತೆಗೆ ಕರೆದುಕೊಂಡು ಹೋದರೆ ಅನುಕೂಲ ಆಗುತ್ತದೆ ಎಂದು ಕೊಂಡರು.
ಮರುದೇವಿಯವರು ಮನೆಯಿಂದ ಹೊರಟು ಹೊಸ್ತಿಲು ದಾಟಿದ ಕೂಡಲೇ, ಆಕಸ್ಮಿಕ ಎಂಬಂತೆ ದೇವರಾಜ ಬಂಗನೇ ಎದುರುಗಡೆ ಬರುತ್ತಿದ್ದಾನೆ.
ಮತ್ತೆ ಮನೆಗೆ ಬಂದು, ದೇವರಾಜನಿಗೆ ಕಾಫಿ ಕೊಟ್ಟು ಉಪಚರಿಸಿದರು
ಮರುದೇವಿಯವರು , ತಾನು ಹೊರಟ ವಿಷಯವನ್ನು ತಿಳಿಸಿ. "ನಿನ್ನನ್ನೇ ಹುಡುಕುತ್ತಾ ಹೊರಟೆ, ನೀನೆ ಎದುರು ಸಿಕ್ಕಿದೆ, ಬಾ ಹೋಗಿ ಬರೋಣ, ದೇವರಾಜ" ಎಂದರು.
ಆಗ ದೇವರಾಜರು, " ಚಿಕ್ಕಮ್ಮ ನಾನು ಬಂದ ವಿಷಯವೇ ಬೇರೆ, ಒಂದು ಶುಭ ಸುದ್ದಿಯನ್ನು ತಂದಿದ್ದೇನೆ. ಈ ಸಮಯದಲ್ಲಿ ನೀವು ಆಗದ ಹೋಗದ ವಿಷಯವನ್ನು ಮಾತನಾಡುತ್ತಿರಲ್ವಾ.
ಆ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿ ಹೋರಾಟ ಮಾಡುತ್ತಾ ಕುಳಿತರೆ, ಸತ್ತವನು ಮತ್ತೆ ಬದುಕಿ ಬರುತ್ತಾನೆಯೇ..?
ನಾನು ಬಂದಿದ್ದು ಹೆಣ್ಣು ಮಕ್ಕಳ ನೆಂಟಸ್ತಿಕೆ ಬಗ್ಗೆ ಮಾತನಾಡಲು ಸರಸ್ವತಿಗು, ಸುನಂದಳಿಗು, ಇಬ್ಬರಿಗೂ ಒಳ್ಳೆಯ ಕಡೆಯ ಎರಡು ಸಂಬಂಧಗಳಿವೆ." ಎಂದರು
ಆಗ ಮರುದೇವಿಯವರು, "ನೋಡು ದೇವರಾಜ ಮಕ್ಕಳಿಗೆ ಮದುವೆ ಮಾಡುವುದು ಇದ್ದೇ ಇದೆ. ಹಾಗಂತ ನಮಗೆ ನ್ಯಾಯ ಸಿಗುವುದು ಬೇಡವೇ ?
ನಮ್ಮ ಶಾಂತಿಯ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗುವುದು ಬೇಡವೇ ? " ಎಂದರು.
ಆಗ ದೇವರಾಜರು, " ನೋಡಿ ಚಿಕ್ಕಮ್ಮ ಪ್ರಾಯಕ್ಕೆ ಬಂದ ಹುಡುಗಿಯರಿಗೆ ಮದುವೆ ಮಾಡುವುದು ಬಿಟ್ಟು ಕಾನೂನು ಹೋರಾಟಕ್ಕೆ ಇಳಿದರೆ ಏನು ಪ್ರಯೋಜನ. ?
ಸತ್ತವನೇನು ಮತ್ತೆ ಬದುಕಿ ಬರುತ್ತಾನೆಯೇ ? " ಎಂದರು.
ಆಗ ಮರುದೇವಿಯವರು " ಹಾಗಲ್ಲ ದೇವರಾಜ, ಈ ಕಾಲ ಕಳೆದು ಹೋದರೆ, ಮತ್ತೆ ವಿಳಂಬವಾಗಿ ದೂರು ಕೊಟ್ಟರೆ, ಪ್ರಯೋಜನವಾಗುವುದಿಲ್ಲ. ಅಲ್ವಾ " ಎಂದರು.
ಆಗ ದೇವರಾಜ ಸ್ವಲ್ಪ ಕೋಪಗೊಂಡು, " ನೀವು ದೂರು ಕೊಟ್ಟು ಅವರಿಗೆ ಶಿಕ್ಷೆ ಆದರು ಸತ್ತವನೇನು ಮತ್ತೆ ಬದುಕಿ ಬರುವುದಿಲ್ಲ. ಅವನ ಆಯುಷ್ಯ ಅಷ್ಟೆ ಇದ್ದದ್ದು. ಹಾಗೆ ಸತ್ತು ಹೋದ. ಚಿಕ್ಕಮ್ಮ, ನಿಮಗೆ, ಸತ್ತವನಿಗೆ ನ್ಯಾಯ ದೊರಕಿಸುವುದು ಮುಖ್ಯವೋ, ಅಥವಾ ಬದುಕಿರುವವರ ಬದುಕು ರೂಪಿಸುವುದು ಮುಖ್ಯವೋ. ನಿರ್ಧರಿಸಿ " ಎಂದು ಹೇಳಿ ಹೊರಡಲು ಎದ್ದು ನಿಂತರು.
ಆಗ ಮರುದೇವಿಯವರು " ನಿಲ್ಲು ದೇವರಾಜ" ಎಂದರು
ತನ್ನ ಕೈ ಚೀಲದಿಂದ ಮ್ಯಾಜಿಸ್ಟರೆಟ್ಗೆ ದೂರು ಬರೆದ ದೂರು ಪತ್ರವನ್ನು ಹೊರ ತೆಗೆದವರೇ, ಅದನ್ನು ಹರಿದು ಹಾಕಿದರು.
ದುಃಖ್ಖ ಮತ್ತು ಹತಾಶೆಯಿಂದ ಅವರ ಕಣ್ಣಿನಿಂದ ನೀರಿಳಿಯುತಿತ್ತು. ಬಿಕ್ಕಿ ಬಿಕ್ಕಿ ಅತ್ತರು.
ಮರುದೇವಿ ಅಮ್ಮನು
ಜೀವನದಲ್ಲಿ ಎರಡನೇ ಬಾರೀ ಪರಿಸ್ಥಿತಿಯೊಂದಿಗೆ ಸೋಲಬೇಕಾಯಿತು.
(ಮುಂದುವರಿಯುತ್ತದೆ)
ಕಾಮೆಂಟ್‌ಗಳು