ಮರುದೇವಿಯಮ್ಮನವರು ತನ್ನ ಮಕ್ಕಳೊಂದಿಗೆ ಮನೆ ಬಿಟ್ಟು ಬಂದವರು ಸೇರಿಕೊಂಡಿದ್ದು. ತಮ್ಮದೇ ದೂರದ ಸಂಬಂದಿಕರಾದ, ಹಾಗೂ ಬಾಲ್ಯದಲ್ಲಿ ತಮ್ಮ ಮನೆಯಲ್ಲೇ ವಿದ್ಯಾಭ್ಯಾಸ ಮಾಡುತಿದ್ದ, ಬೊಳ್ಳಾರ್ ಚಂದಯ್ಯ ಕೊಟ್ಟಾರಿಯವರ ಮನೆಗೆ, ಕೆಲವಾರು ದಿನಗಳು ಕಳೆದು ಹೋದವು. ಇವರು ಮಾನಸಿಕವಾಗಿಯೂ ದೈಹಿಕವಾಗಿಯು
ಸ್ವಲ್ಪ ಸುಧಾರಿಸಿಕೊಂಡರು.
ಈ ಮದ್ಯೆ, ಒಂದು ದಿನ ಇವರ ಅಮ್ಟುರಿನ ಮನೆಯ ಕಡೆಯ ಒಕ್ಕಲಿನವನೊಬ್ಬ, ಇವರಿಗೆ ಇವರ ತಮ್ಮ ಹಲ್ಲೆ ನಡೆಸಿದ ವಿಷಯ ತಿಳಿದು, ಇವರಿದ್ದ ಮನೆಯನ್ನು ಹುಡುಕಿಕೊಂಡು ಬೊಳ್ಳಾರಿನ ಮನೆಗೆ ಬಂದಿದ್ದ. ಈತ ಮತ್ತು ಮರುದೇವಿಯವರ ತಮ್ಮ ಪಟೇಲ ನೇಮಿರಾಜರು, ಇವರಿಬ್ಬರೂ ಬದ್ದ ವೈರಿಗಳು. ಈತ ಬಂದವನು ನಡೆದ ಗಲಾಟೆಯ ಬಗ್ಗೆ ಎಲ್ಲಾ ವಿಚಾರಿಸಿದ ನಂತರ, "ನೀವು ಒಂದು ಮಾತು ಹೇಳಿ ಅಕ್ಕಾ, ಪಟೇಲರ ಕೈ ಕಾಲು ನಾವು ಮುರಿಯುತ್ತೇವೆ" ಎಂದು ಬಿಟ್ಟ
ಆಗ ಮರುದೇವಿಯವರು ಒಂದು ಕ್ಷಣ ಮೌನವಾದರು. ತುಂಬಾ ಆಲೋಚಿಸಲು ಪ್ರಾರಂಭಿಸಿದರು. ಆಗ ಕೊಟ್ಟಾರಿಯವರ ತಾಯಿ "ಬೇಡ ಮರುದೇವಿ, ಅಂತಹ ನಿರ್ಧಾರಕ್ಕೆ ಬರಬೇಡ. ನಿನಗಿಬ್ಬರು ಹೆಣ್ಣು ಮಕ್ಕಳು ಇದ್ದಾರೆ " ಅವರ ಭವಿಷ್ಯದ ಬಗ್ಗೆ ಯೋಚಿಸು ಎಂದರು.
ಆಗ 'ಮರುದೇವಿ ಅಮ್ಮ' ಒಕ್ಕಲಿನವನಲ್ಲಿ "ನನಗಾದ ನೋವು ನಾನು ಎದುರಿಸುತ್ತೇನೆ. ಸದ್ಯಕ್ಕೆ ನಿನ್ನ ಯಾವುದೇ ಸಹಾಯ ಬೇಕಾಗಿಲ್ಲ" ಎಂದರು.
ಆಗ ಆ ಕ್ಷಣಕ್ಕೆ ಮರುದೇವಿ ಅಮ್ಮ ಸುಮ್ಮನಾದರೂ ತಮ್ಮನ ಬಗ್ಗೆ , ಕೋಪ, ದುಃಖ್ಖ ಹತಾಶೆಗಳಿಂದ ಮನಸ್ಸು ಕುದಿಯುತ್ತಿತ್ತು.
ದಿನಗಳುರುಳುತ್ತಿದ್ದವು,,
ಇನ್ನು ತನ್ನ ಮತ್ತು ತನ್ನಿಬ್ಬರು ಮಕ್ಕಳ ಜೀವನ ನಡೆಸಲು ದಾರಿ ಹುಡುಕಬೇಕು. ಅಸ್ತಿಯ ಪಾಲಿಗಾಗಿ ಈ ಸಂದರ್ಭದಲ್ಲಿ ತಮ್ಮ ಪಟೇಲ ನೇಮಿರಾಜನೊಡನೆ ಹೋರಾಟ ನಡೆಸುವುದು ಅಸಾಧ್ಯ.
ಹಾಗಂತ ಇನ್ನೊಬರ ಮನೆಯಲ್ಲಿ ಹೀಗೆ ಇರಲು ಸಾಧ್ಯವಿಲ್ಲ.
ನಮ್ಮದು ಸ್ವಾಭಿಮಾನದಿಂದ ಬದುಕಿದ ಕುಟುಂಬ.
ಮುಂದೆ ಜೀವನ ನಡೆಸಲು ಏನು ಮಾಡುವುದು ಎಂಬ ಚಿಂತೆ ಪದೇ ಪದೇ ಇವರನ್ನು ಕಾಡುತಿತ್ತು.
ಇದ್ದ ಒಬ್ಬ ಮಗನೂ ದೂರವಾಗಿದ್ದ. ತನ್ನ ತಾಯಿ ಮತ್ತು ಸೋದರ ಮಾವನ ನಡುವಿನ ಗಲಾಟೆಯಿಂದ ಬೇಸತ್ತ, ಮಗ 'ಶಾಂತಿರಾಜ' ಊರು ಬಿಟ್ಟು ದೂರ ಹೊರಟು ಹೋಗಿದ್ದರು.
ಯಾರಲ್ಲಿಯೂ ಹೇಳದೆ ಮಡಿಕೇರಿ ಕಡೆ ಕೆಲಸ ಹುಡುಕಿಕೊಂಡು ಹೋಗಿ. ಮಡಿಕೇರಿಯ ಆ ಕಾಲದ ಪ್ರಸಿದ್ಧ ಶ್ರೀಮಂತ ಮಹಿಳೆ, ಕಾಫಿ ಎಸ್ಟೇಟ್ ಮಾಲಕಿ "ಸಾಕಮ್ಮ" ಅವರ ತೋಟದಲ್ಲಿ ರೈಟರ್ ಆಗಿ ಸೇರಿ ಕೊಂಡಿದ್ದರು. ಈ ವಿಷಯ, ಕಾಫಿ ಎಸ್ಟೇಟ್ ಗೆ ಕೆಲಸಕ್ಕಾಗಿ ಈ ಕಡೆಯಿಂದ ಹೋಗುತ್ತಿದ್ದ ಕಾರ್ಮಿಕರಿಂದ ಮರುದೇವಿಯವರಿಗೆ ತಿಳಿಯಿತು.
ಇರಲಿ ಗಂಡು ಮಗ ಎಲ್ಲಾದರೂ ಬದುಕಿ ಕೊಳ್ಳಲಿ. ಎಂದು ಸಮಾಧಾನ ಮಾಡಿಕೊಂಡರು.
ಮರುದೇವಿಯಮ್ಮ ತನ್ನ ಮತ್ತು ಇಬ್ಬರು ಹೆಣ್ಣು ಮಕ್ಕಳ ಭವಿಷ್ಯ ಮತ್ತು ಜೀವನೋಪಾಯಕ್ಕೆ ಏನಾದರೂ ಮಾಡಬೇಕು ಎಂದು ಕೊಂಡರು.
ಹೀಗೆ ಹೆಚ್ಚು ದಿನ ಕೊಟ್ಟಾರಿಯವರ ಮನೆಯಲ್ಲಿ ಇರಲು ಮನಸ್ಸು ಒಪ್ಪಲಿಲ್ಲ. ಒಂದು ದಿನ ಕೊಟ್ಟಾರಿಯವರಿಗೆ ಮತ್ತು ಅವರ ಮನೆಯವರಿಗೆ ತಿಳಿಸಿ, ಅವರುಗಳನ್ನು ಒಪ್ಪಿಸಿ. ತನ್ನಿಬ್ಬರು ಮಕ್ಕಳೊಡನೆ ಅಲ್ಲಿಂದ ಹೊರಟು ಹೋದರು.
(ಮುಂದುವರಿಯುತ್ತದೆ)
ಕಾಮೆಂಟ್‌ಗಳು