"ಶಾಂತಿ ರಾಜ," ಮೂರ್ಛೆ ಹೋಗುವ ಮೊದಲು ಅತಿಯಾದ ಪ್ರಾಣ ವೇದನೆಯಿಂದ ನರಳಿರಬಹುದು. ಆದರೆ ಈಗ ಅದನ್ನು ಕಲ್ಪಿಸಿಕೊಳ್ಳುವಾಗ ತಾಯಿ ಮರುದೇವಿ ಅಮ್ಮ ದುಃಖ್ಖ ಮತ್ತು ಕೋಪದಿಂದ ನಡುಗುತ್ತಿದ್ದಾರೆ.
ಉಸಿರಾಡಲು ಗಾಳಿಯೇ ಇಲ್ಲ, ಹೊಗೆ ಮಿಶ್ರಿತ ಗಾಳಿಯನ್ನು ಉಸಿರಾಡುತ್ತಿದ್ದಾನೆ. ಆದರೆ ಪ್ರಾಣ ಹೋಗಿಲ್ಲ. ಕ್ರಮೇಣ ಮೂರ್ಛೆ ತಪ್ಪಿ ಹೋಗಿರ ಬಹುದು.
ಏನು ತಪ್ಪು ಮಾಡದ "ಅಮಾಯಕ" ಯುವಕನೊಬ್ಬ ಪುಂಡ ಪೋಕರಿ ಹುಡುಗರ ಹುಚ್ಚಾಟಕ್ಕೆ ಬಲಿಯಾಗುತ್ತಿದ್ದಾನೆ.
ಯುವಕರ ಗುಂಪು ಊರೆಲ್ಲ ಸುತ್ತಾಡಿ, ಎಲ್ಲಾ ಕಡೆ ಕೀಟಲೆ ಮಾಡಿ. ಜುಗರಿಯಾಟ ಆಡಿ, ನದಿಯಲ್ಲಿ ಈಜಾಡಿ, ಚೆನ್ನಾಗಿ ಹಸಿವಾದಾಗ ಮದ್ಯಾಹ್ನದ ಊಟದ ಸಮಯ ಸುಮಾರು ಒಂದು ಗಂಟೆಯ ಹೊತ್ತಿಗೆ ಮನೆಗೆ ಬಂದರು.
ಮನೆಯ ಹೆಂಗಸರೆಲ್ಲ ಸೇರಿ ಊಟಕ್ಕೆ ಬಗೆ ಬಗೆಯ ಮೃಷ್ಟಾನ್ಹ ಭೋಜನ ತಯಾರಿ ಮಾಡಿದ್ದರು. ಮನೆಯಲ್ಲಿ ನೆಂಟರಿಷ್ಟರು ಮಕ್ಕಳು ಎಲ್ಲಾ ಸೇರಿ ತುಂಬಾ ಮಂದಿ ಇದ್ದಾರೆ. ಎಲ್ಲರು ಊಟ ಮಾಡಿದರು. ಯುವಕರು ತುಂಬಾ ಗಮ್ಮತ್ತಿನಿಂದ ಊಟ ಮಾಡಲು ಪ್ರಾರಂಭಿಸಿದರು. ಸುಮಾರು ಅರ್ಧ ಊಟ ಮಾಡಿರ ಬಹುದು, ಆಗ ಯಾರೋ ಒಬ್ಬರು "ನಿಮ್ಮ ಕುರುಂಟು "ಶಾಂತಿ" ಎಲ್ಲಿ" ? ಎಂದು ಕೇಳಿದರು.
ಎಲ್ಲರು ಒಂದು ಕ್ಷಣ ಮೌನವಾದರು. !
ಊಟಕ್ಕೆ ಕುಳಿತ ಯುವಕರಿಗೆ ಒಮ್ಮೆಲೆ ಗಾಬರಿಯಾಯಿತು. ಬೆಳಿಗ್ಗೆ ತಾವು ಮಾಡಿದ ತಮಾಷೆ, ಹಾಗೂ ಶಾಂತಿಯನ್ನು ಗೋಣಿಚೀಲದಲ್ಲಿ ಕಟ್ಟಿ ಅಡಿಗೆ ಕೋಣೆಯ ಉಪ್ಪರಿಗೆಯಲ್ಲಿ ಹಾಕಿದ್ದು ಎಲ್ಲಾ ಒಮ್ಮೆಲೇ ನೆನಪಾಯಿತು. ಎಲ್ಲರು ಗಾಬರಿಗೊಂಡು ಅರ್ಧ ಊಟದಿಂದ ಎದ್ದು ಮಾಳಿಗೆಗೆ ಶಾಂತಿರಾಜ ಇದ್ದ ಕಡೆ ಓಡಿದರು.
ಹಾಗೂ ಒಂದಿಬ್ಬರು ಯುವಕರು ಗೋಣಿ ಚೀಲ ಇಟ್ಟಿರುವ ಆ ಹೊಗೆಯಾಡುವ ಕೋಣೆಯೊಳಗಡೆ ಹೋದರು ಗೋಣಿ ಚೀಲವನ್ನು ಬಹಳ ಪ್ರಯಾಸ ಪಟ್ಟು ಹೊರಗೆ ತಂದರು. ಒಂದು ಕ್ಷಣ ಕೊನೆಯೊಳಗಡೆ ಹೋದ ಆ ಯುವಕರು ಕೆಮ್ಮುತ್ತಾ ಕಣ್ಣುಜ್ಜಿ ಕೊಳ್ಳುತ್ತಿದ್ದಾರೆ. ಇನ್ನು ಅರ್ಧ ದಿನದಿಂದ ಗೋಣಿದಲ್ಲಿ ಬಂದಿಸಲ್ಪಟ್ಟು ಮುದುಡಿ ಬಿದ್ದಿರುವ ಯುವಕನ ಪರಿಸ್ಥಿತಿ...!
ಒಬ್ಬ ಯುವಕ ಗೋಣಿ ಚೀಲದ ಬಾಯಿ ತೆರೆದ, ಆ ಭಯಾನಕ ದೃಶ್ಯ ನೋಡಿ ಎಲ್ಲರು ಗಾಬರಿ ಗೊಂಡರು.
(ಮುಂದುವರೆಯುತ್ತದೆ)
ಕಾಮೆಂಟ್‌ಗಳು