ಮದುವೆಯ ಸಮಾರಂಭವೊಂದರಲ್ಲಿ ಮರುದೇವಿ ಅವರಿಗೆ ತನ್ನ ಮಗನದ್ದು ಸ್ವಭಾವಿಕ ಸಾವಲ್ಲ ಅದು ಕೊಲೆ ಎಂದು ತಿಳಿಯುತ್ತದೆ.
ಹೆಂಗಸರಿಬ್ಬರು ಇವರ ಮಗ ಶಾಂತಿರಾಜನ ಬಗ್ಗೆ ಮಾತನಾಡುವುದನ್ನು ಇವರು ಆಕಸ್ಮಿಕವಾಗಿ ಕೇಳಿಸಿಕೊಂಡಿರುತ್ತಾರೆ.
ಕೂಡಲೇ ಆ ಮಹಿಳೆಯಲ್ಲಿ ವಿಚಾರಿಸಿದಾಗ ಅವರು ವಿಷಯವನ್ನು ಸರಿಯಾಗಿ ಹೇಳಲಿಲ್ಲ.
ಮಾತನಾಡಿಕೊಂಡಿದ್ದ ಮಹಿಳೆಯರಲ್ಲಿ ಒಬ್ಬರ ಪರಿಚಯ 'ಮರುದೇವಿಯವರಿಗೆ ಇತ್ತು.
ಮಗನದ್ದು ಸಹಜ ಸಾವಲ್ಲ ಕೊಲೆ ಎಂದು ತಿಳಿದ ಕೂಡಲೆ ಮರುದೇವಿ ಅಮ್ಮ,ಕೋಪ ಆವೇಶದಿಂದ ಕ್ರುದ್ರರಾದರು, ತನ್ನ ಬಗ್ಗೆಯೇ ತನಗೆ ಜಿಗುಪ್ಸೆ ಆಯಿತು.
ನನ್ನ ಮಗನ ಸಾವಿನ ಬಗ್ಗೆ ನಿಜ ವಿಷಯ ಹೇಗಾದರೂ ಮಾಡಿ ತಿಳಿದು ಕೊಳ್ಳಲೇ ಬೇಕು ಎಂದು ದೃಢ ನಿರ್ಧಾರಕ್ಕೆ ಬಂದರು.
ಮದುವೆಯಲ್ಲಿ, ಇವರ ಮಗನ ಸಾವಿನ ಬಗ್ಗೆ ಮಾತನಾಡುತಿದ್ದ ಮಹಿಳೆಯರಲ್ಲಿ ಒಬ್ಬಾಕೆ ಕಮಲಕ್ಕ .
ಆ ಮಹಿಳೆಯ ಮನೆ , ಇವರಿಗೆ ತಿಳಿದಿತ್ತು.
ಒಂದು ದಿನ ಇವರು ಬೆಳಗ್ಗಿನ ಹೊತ್ತು, ಕಮಲಕ್ಕನನ್ನು ಹುಡುಕಿಕೊಂಡು ಅವರ ಮನೆಯತ್ತ ಹೋದರು. ಇವರನ್ನು ನೋಡಿದ ಕೂಡಲೇ ಕಮಲಕ್ಕ ಗಾಬರಿಗೊಂಡರೂ ತೋರ್ಪಡಿಸಿಕೊಳ್ಳಲಿಲ್ಲ. ಹಾಗೂ ಮನೆಗೆ ಬಂದ ಇವರನ್ನು ಕುಳ್ಳಿರಿಸಿ ಉಪಚರಿಸಿದರು,
ಮರುದೇವಿ ಅಮ್ಮ ಮಾತನಾಡುತ್ತ ನೇರವಾಗಿ ತನ್ನ ಮಗನ ವಿಷಯಕ್ಕೆ ಬಂದರು. ಆಗ ಕಮಲಕ್ಕ
" ನೋಡಿ ಅಕ್ಕಾ, ನನಗೆ ಆ ಘಟನೆಯ ಬಗ್ಗೆ ಗೊತ್ತಿಲ್ಲ, ಯಾರೋ ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ ಅಷ್ಟೇ " ಎಂದರು.
ಆಗ ಮರುದೇವಿ ಅಮ್ಮ
" ಇರಬಹುದು ಕಮಲ, ಆದರೆ ಆ ಮನೆಯವರು ನಿನ್ನ ಸಂಬಂಧಿಕರೆಂದು ನನಗೆ ತಿಳಿದಿದೆ. ಅದಲ್ಲದೆ ಮದುವೆಯ ಸಂದರ್ಭದಲ್ಲಿ ನೀನು ಆ ಮನೆಯಲ್ಲಿ ಇದ್ದವಳು. ಈಗ ಏನು ತಿಳಿದಿಲ್ಲ ಎಂದು ಹೇಳಿದರೆ, ಹೇಗೆ ? ನೀನು ಏನೂ ಹೇಳದೆ ಇದ್ದರೆ ನಾನು ನಿನ್ನನ್ನೂ ಸೇರಿಸಿ ಎಲ್ಲರ ಮೇಲು ಪೊಲೀಸರಿಗೆ ದೂರು ಕೊಡ ಬೇಕಾಗುತ್ತದೆ. " ಎಂದು ಸ್ವಲ್ಪ ಕಟುವಾಗಿ ನುಡಿದರು.
ಇದರಿಂದ ಸ್ವಲ್ಪ ಬೆದರಿದ ಕಮಲಕ್ಕ,
" ನೋಡಿ ಅಕ್ಕಾ, ದಯವಿಟ್ಟು ಅಂತಹ ಕೆಲಸ ಮಾಡಬೇಡಿ, ನನಗೆ ಗೊತ್ತಿರುವುದನ್ನು ಎಲ್ಲವನ್ನು ಹೇಳುತ್ತೇನೆ. ಆ ವ್ಯಕ್ತಿಗಳು ಶ್ರೀಮಂತರು, ಬಲಾಡ್ಯರು ಅವರ ವಿಷಯ ನನಗ್ಯಾಕೆ ಎಂದು ಸುಮ್ಮನಿದ್ದೆ. ಈಗ ಎಲ್ಲವನ್ನು ಹೇಳುತ್ತೇನೆ ಕೇಳಿ." ಎಂದರು ಕಮಲಕ್ಕ.
ಮದುವೆ ಮನೆಯಲ್ಲಿ ನಡೆದ ಘಟನೆ ಗಳನ್ನು ವಿವರಿಸತೊಡಗಿದರು ಕಮಲಕ್ಕ,,,
(ಮುಂದುವರಿಯುತ್ತದೆ)
ಕಾಮೆಂಟ್‌ಗಳು