ಮರುದೇವಿಯವರ ಮೂವರು ಮಕ್ಕಳಲ್ಲಿ ಹಿರಿಯವನು ಗಂಡು ಮಗ ಶಾಂತಿ,, ಶಾಂತಿರಾಜ. ಸುಮಾರು ಮೂವತ್ತು ವರ್ಷದ ಯುವಕ. ಅವಿವಾಹಿತ, ಇಬ್ಬರು ಹೆಣ್ಣು ಮಕ್ಕಳು ಸರಸ್ವತಿ ಮತ್ತು ಸುನಂದಾ, ಶಾಂತಿರಾಜನಿಗಿಂತ ವಯಸ್ಸಿನಲ್ಲಿ ತುಂಬಾ ಸಣ್ಣವರು.
ತನ್ನ ಗಂಡು ಮಕ್ಕಳಲ್ಲಿ ಬದುಕಿ ಉಳಿದಿದ್ದವನು 'ಶಾಂತಿರಾಜ' ಒಬ್ಬನೆ. ಅವನು ಕೆಲ ಸಮಯದಿಂದ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದು ಈ ದಿನ ಪ್ರಾಣ ಬಿಟ್ಟ.
ಹೆತ್ತ ತಾಯಿಯ ರೋದನ ಮುಗಿಲು ಮುಟ್ಟಿತು.
ಅದು ಮಳೆಗಾಲದ ಸಮಯ ಎಡೆಬಿಡದೆ ಮಳೆ ಸುರಿಯುತ್ತಿದೆ. ಇವರಿರುವ ಮನೆಯಿಂದ ಪಟ್ಟಣಕ್ಕೆ ಹೋಗಲು ನದಿ ದಾಟ ಬೇಕು. ನದಿಯು ತುಂಬಿ ಹರಿಯುತ್ತಿದೆ. ದೋಣಿಯ ವ್ಯವಸ್ಥೆ ಇಲ್ಲ. ತೆಪ್ಪ ಕಟ್ಟಿರಲಿಲ್ಲ. ನೆಂಟರಿಷ್ಟರು ಇರುವುದು ಸ್ವಲ್ಪ ದೂರದ ಊರಿನಲ್ಲಿ. ಅವರನ್ನು ಕರೆಯಲು ನದಿ ದಾಟಿ ಹೋಗಬೇಕು. ಅದು ಈಗ ಅಸಾಧ್ಯ. ಇದರಿಂದಾಗಿ ಅವರ್ಯಾರು ಮಗನ ಶವ ಸಂಸ್ಕಾರಕ್ಕೆ ಭಾಗವಹಿಸುವಂತಿಲ್ಲ.
ನದಿಯಲ್ಲಿ ನೀರು ಇಳಿಯುವ ಲಕ್ಷಣ ಕಾಣುತ್ತಿಲ್ಲ. ಬೇರೆ ದಾರಿ ತೋಚದೆ ಶವ ಸಂಸ್ಕಾರಕ್ಕೆ ರೆಡಿ ಮಾಡಿದರು. ನೆರೆಹೊರೆಯವರು ಎಲ್ಲಾ ವ್ಯವಸ್ಥೆ ಮಾಡಿಕೊಟ್ಟರು.
ಆದರೆ ವಿಧಿ ವಿಧಾನಗಳನ್ನು ಇವರೆ ನೆರೆವೆರಿಸುತ್ತಿದ್ದಾರೆ.
ಆ ಎರಡು ಹೆಣ್ಣು ಮಕ್ಕಳೊಂದಿಗೆ ಸೇರಿ, ತಾಯಿ ತನ್ನ ಗಂಡು ಕುಡಿ ಒಬ್ಬನೇ ಮಗನ ಅಂತ್ಯ ಕ್ರಿಯೆಯನ್ನು ಮಾಡುತ್ತಿದ್ದಾರೆ.
ಇವರ ಸಂಬಂಧಿಕ ಊರಿನ ಹಿರಿಯವರೊಬ್ಬರು ಅಂತ್ಯ ಕ್ರಿಯೆ ನಡೆಸಲು ನಿರ್ದೇಶನ ನೀಡುತ್ತಿದ್ದಾರೆ. ಆದರೆ ಆ ವ್ಯಕ್ತಿ ದೈವಸ್ಥಾನವೊಂದರ ಗಡಿಪ್ರದಾನ ಆದವರು ಶವ ಮುಟ್ಟುವಂತಿಲ್ಲ,
ಈ ಮೂವರು ತಾಯಿ ಮಕ್ಕಳು ಸೇರಿಕೊಂಡು, ಮೃತ ದೇಹವನ್ನು ಧಪನ ಮಡುವೆಡೆ ಕಷ್ಟ ಪಟ್ಟು ಸಾಗಿಸುತ್ತಿದ್ದಾರೆ. ಅಲ್ಲಲ್ಲಿ ಇಟ್ಟು ಇಟ್ಟು ಸಾಗಾಟ ಮಾಡುತ್ತಿದ್ದಾರೆ.
ಕಟ್ಟಿಗೆ ಜೋಡಿಸಿ ಮಳೆ ಬಿಟ್ಟ ನಂತರ ಹೇಗೋ ಶವ ಸಂಸ್ಕಾರ ಮುಗಿಸಿದರು.
ಮಗ 'ಶಾಂತಿರಾಜ' ದಿಢೀರ್ ಖಾಯಿಲೆ ಬಂದು ಮರಣ ಹೊಂದಿದ.
ಇದ್ದ ಒಬ್ಬನೇ ಒಬ್ಬ ಗಂಡು ಮಗ. ಬಾಳಿ ಬದುಕಬೇಕಿದ್ದವ. ಮುಪ್ಪಿನಲ್ಲಿ ತನಗೆ ಆಸರೆ ಆಗಬೇಕಿದ್ದವ, ಈಗ ನಮ್ಮೆಲ್ಲರನ್ನು ಅಗಲಿದ. ಸಂಬಂದಿಕರು, ಊರವರು ಸಮಾಧಾನ ಪಡಿಸಿ ಹೋದರು. ಆದರೆ ತಾಯಿ ಜೀವಂತವಾಗಿರುವಷ್ಟು ದಿನ ತನ್ನ ಕರುಳ ಕುಡಿಯನ್ನು ಮರೆಯಲು ಸಾಧ್ಯವೇ ?. ಅದರಲ್ಲೂ ಬೆಳೆದು ನಿಂತದ್ದ ಬಿಸಿರಕ್ತದ ಯುವಕ.
ದಿನಗಳು ಉರುಳಿದವು, ತಿಂಗಳುಗಳು ಉರಿದವು. ಮರುದೇವಿ ಅಮ್ಮನವರ ದುಃಖ್ಖ ಸ್ವಲ್ಪ ಕಡಿಮೆಯಾಗಿತ್ತು
ಪಕ್ಕದ ಊರಿನಲ್ಲಿ ಯಾರದೋ ಮದುವೆಯ ಸಮಾರಂಭ ಇತ್ತು. ಮದುವೆ ಮನೆಯವರು ಬಹಳ ಒತ್ತಾಯ ಪಡಿಸಿದ್ದರಿಂದ, ಮರುದೇವಿ ಅವರು ಮದುವೆಗೆ ಹೋಗಿದ್ದರು. ಮದುವೆಯ ಕಾರ್ಯಕ್ರಮಗಳು ಮುಗಿದವು. ಊಟ ಆದ ನಂತರ ಮಹಿಳೆಯರೆಲ್ಲ ಒಂದಡೆ ಕುಳಿತು ಮಾತನಾಡುತ್ತಿದ್ದರು. ಆ ಗುಂಪಿನ ಬಳಿ. ಮರುದೇವಿ ಅಮ್ಮನು ಹೋಗಿ ಕುಳಿತಿದ್ದರು. ಆಗ ಹಿಂಬದಿಯಲ್ಲಿ ಕುಳಿತ ಮಹಿಳೆ ತನ್ನ ಪಕ್ಕದಲ್ಲಿ ಕುಳಿತಿದ್ದಾಕೆಯ ಬಳಿ, ಮರುದೇವಿಯವರನ್ನು ತೋರಿಸಿ, ಏನೋ ಮೆಲ್ಲನೆ ಪಿಸುಗುಟ್ಟಿದರು.
ಆದರೆ ಆ ಮಾತು ಮರುದೇವಿ ಅವರ ಕಿವಿಗೂ ಬಿತ್ತು.
ಆ ಮಹಿಳೆ ಹೇಳಿದ್ದು
"ಇವರ ಮಗನನ್ನೇ ಅವತ್ತು ಬೆಳಿಯೂರಿನವರ ಮದುವೆಯ ಮನೆಯಲ್ಲಿ ಕೊಲೆ ಮಾಡಿದ್ದು" ಎಂದು.
ಆ ಮಾತನ್ನು ಕೇಳಿ ಮರುದೇವಿಯವರಿಗೆ ಸಿಡಿಲು ಬಡಿದಂತೆ ಆಯಿತು. ನಿಂತ ನೆಲ ಕುಸಿದಂತೆ ಆಯಿತು.
ಏನು ಹೇಳುತ್ತಿದ್ದಾರೆ ಈ ಮಹಿಳೆ. ನನ್ನ ಮಗನದ್ದು ಸಹಜ ಸಾವಲ್ಲವೇ ? !
ಕೊಲೆಯೇ ! ?
(ಮುಂದುವರಿಯುತ್ತದೆ)
ಕಾಮೆಂಟ್‌ಗಳು