ತಂದೆ, ತಾಯಿಯ ಅಗಲಿಕೆ..
ಗಂಡನ ಅಗಲಿಕೆ..
ಖಾಯಿಲೆಯಿಂದ ಸತ್ತು ಹೋದ ತನ್ನ ಐದಾರು ಕುಡಿಗಳು...
ತಮ್ಮನೊಂದಿಗೆ ಮನಸ್ತಾಪ.. ಇದೀಗ, ಮನೆಗೆ ಗಂಡು ದಿಕ್ಕಾಗಿದ್ದ ತನ್ನ ಜೀವದಂತಿದ್ದ ಮಗ, ಜೀವಚ್ಛವದಂತೆ ಮಲಗಿದ್ದಾನೆ.
ಮರುದೇವಿ ಅವರಿಗೆ ತಾನು ಜೀವನದುದ್ದಕ್ಕೂ ನೋವನ್ನೇ ಅನುಭವಿಸಲು ಹೊಟ್ಟಿದವಳೇ ಎಂದು ಬಹಳ ದುಃಖ್ಖವಾಗುತ್ತಿತ್ತು.
ಮಗ "ಶಾಂತಿರಾಜ"ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿಲ್ಲ.
ತಾಯಿ ಇದ್ದ ದೇವರಿಗೆಲ್ಲ ಹರಕೆ ಹೊತ್ತುಕೊಂಡರು. ಬೇರೆ ಬೇರೆ ವೈದ್ಯರುಗಳನ್ನು ಕರೆ ತಂದು ಚಿಕೆತ್ಸೆ ಕೊಡಿಸಿದರು. ಆದರೆ ಅದ್ಯಾವುದು ಪರಿಣಾಮ ಬೀರಲಿಲ್ಲ. ಮಗನ ಅರೋಗ್ಯ ಸುಧಾರಿಸಲು ಇಲ್ಲ. ಆತನ ದೇಹ ಚಿಕಿತ್ಸೆಗೆ ಸ್ಪಂದಿಸಲೂ ಇಲ್ಲ. ಇದರಿಂದಾಗಿ ತಾಯಿ ಮತ್ತು ತಂಗಿಯಂದಿರು ಸದಾ ಚಿಂತೆಯಲ್ಲಿ ಇರುತ್ತಿದ್ದರು.
ಮಗನನ್ನು ದೂರದ ಪಟ್ಟಣಕ್ಕೆ ಕರೆದೊಯ್ದು ಒಳ್ಳೆ ಚಿಕಿತ್ಸೆ ಕೊಡಿಸಿದರೆ ಚೇತರಿಸಬಹುದು ಎಂಬ ಭರವಸೆ ಇತ್ತು. ಹೇಗಾದರೂ ಮಾಡಿ ಮಗನಿಗೆ ಒಳ್ಳೆ ಚಿಕಿತ್ಸೆ ಕೊಡಿಸಬೇಕು.
ಅದಕ್ಕಾಗಿ ಹಣ ಹೊಂದಿಸಿ ಕೊಳ್ಳಬೇಕು, ಎಂದು ಯೋಚಿಸುತ್ತಿದ್ದರು.
ಹೀಗೆ ಕೆಲವು ದಿನಗಳು ಕಳೆದವು.
ಮರುದಿನ ಮಗನನ್ನು ಚಿಕಿತ್ಸೆಗಾಗಿ ಪಟ್ಟಣಕ್ಕೆ ಕರೆದೊಯ್ಯುವುದು ಎಂದು ನಿರ್ಧರಿಸಿದರು. ಕರೆದೊಯ್ಯಲು ಎತ್ತಿನ ಗಾಡಿಯನ್ನು ಹೇಳಿದ್ದರು.
ಮರುದಿನ ಮುಂಜಾನೆಯ ಸಮಯ, ಮಗ ಶಾಂತಿ ಮಲಗಿದ್ದಲ್ಲಿಂದ ಏನೋ ತೊದಲುತ್ತಿದ್ದ, ಒಮ್ಮೆ ಜೋರಾಗಿ ಅಮ್ಮ ಎಂದು ನರಳಿದ
ತಾಯಿ ಓಡಿ ಬಂದು ಮಗನ ತಲೆಯನ್ನು ತನ್ನ ಮಡಿಲಿನಲ್ಲಿ ಇರಿಸಿಕೊಂಡರು. ಸ್ವಲ್ಪ ನೀರು ಕುಡಿಸಿದರು. ಮಗ ಜೋರಾಗಿ ಉಸಿರು ಎಳೆದು ಕೊಂಡು ಉಸಿರು ಬಿಟ್ಟ.
ಆತನ ಪ್ರಾಣ ಪಕ್ಷಿ ಹಾರಿ ಹೋಯಿತು.
ತಾಯಿಯ ಮತ್ತು ತಂಗಿಯರ ಆಕ್ರಂದನ ಮುಗಿಲು ಮುಟ್ಟಿತು.
(ಮುಂದುವರಿಯುತ್ತದೆ)
ಕಾಮೆಂಟ್‌ಗಳು