ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು. ನರಕವೇದನೆಯನ್ನು ತಡೆಯಲಾರದೆ ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ, ಅವರಲ್ಲಿ ಯಾರೋ ಒಬ್ಬರು, ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ. ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ. ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ, ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ, ಸಂಪೂರ್ಣ ಬೆವತು ಹೋಗಿದ್ದಾರೆ ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ, ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...
ಕಾಮೆಂಟ್‌ಗಳು