ಸಾತ್ವಿಕ ಜೀವನದ
ದಾರಿಯಲಿ
ನಡೆಯಲಾರದೆ
ಎಡವಿದವನು ಅಲೆಮಾರಿಯೋ...!
ಹಣೆಬರಹವನು
ಗೀಚಿಬಿಟ್ಟ
ಭಗವಂತನು ಏನನ್ನೂ
ಅರಿಯದ ಸೋಮಾರಿಯೋ....!
ಜನಮ ನೀಡಿ
ತಿದ್ದಿ ತೀಡಿ,
ಸನ್ಮಾರ್ಗದಲಿ ನಡೆಯಲು
ಪ್ರೇರೇಪಿಸಿದವರಿಗೆ ಅಭಾರಿಯೋ.!
ಮೌನವಾಗಿದ್ದು,
ಜೀವಚ್ಛವದಂತಿರುವ,
ಮುಗ್ದ ಮನಸ್ಸಿನ ಮೇಲೆ
ದಬ್ಬಾಳಿಕೆಯ ಸವಾರಿಯೋ...!
ಅಂಬೆಗಾಲಲಿ ಕಲಿತು,
ದಾಪುಗಾಲಲಿ ನಡೆದು ,
ಕೋಲೂರಿ ನಡೆವ ತನಕ,
ಬಾಳೆಂಬುದು ರಹದಾರಿಯೋ...!
ಜೀವಚ್ಛವದಂತಿರುವ,
ಮುಗ್ದ ಮನಸ್ಸಿನ ಮೇಲೆ
ದಬ್ಬಾಳಿಕೆಯ ಸವಾರಿಯೋ...!
ಅಂಬೆಗಾಲಲಿ ಕಲಿತು,
ದಾಪುಗಾಲಲಿ ನಡೆದು ,
ಕೋಲೂರಿ ನಡೆವ ತನಕ,
ಬಾಳೆಂಬುದು ರಹದಾರಿಯೋ...!
-ಮಿಥುನ್ ಜೈನ್

ಕಾಮೆಂಟ್‌ಗಳು