ಮನುಜ ಕುಲಂ ತಾನೊಂದೆ ವಲಂ
(ಸರಳ ಸೌಹಾರ್ದತೆ)
ಧರ್ಮಗಳೆಲ್ಲವು
ಒಳಿತನು ನೆನೆದರೆ
ಜನಗಳ ಮದ್ಯೆ ದ್ವೇಷವೇಕೆ ! ?
ಕರ್ಮ ಕಾಯಕವ
ಮನವ ಬಯಸಿದರೆ
ಪರರದು ಎಂಬ ಹಂಗೇಕೆ ! ? !ಪ!
ಮಂದಿಯ ಮದ್ಯೆ
ಮುನಿಸಿರದಿದ್ದರೆ
ಜಾತಿ ಜಾತಿ ನಡು ಬಿರುಕೇಕೆ ! ?
ಒಂದಾಗಿದ್ದರೆ,
ಎಲ್ಲಾ ಪಂಗಡಗಳು.
ಏಕಿದೆ ನಡು ನಡು ಗೋಡೆಗಳು ! ಪ!
ಸಾರಿದರಲ್ಲವೇ
ಕವಿ ಕುವೆಂಪು.
ವಿಶ್ವ ಮಾನವತೆಯ ಕಂಪು. !
ಒಂದೇ,,ಜಾತಿ ಮತ,
ದೇವರು ಎಂದರು.
ಗುರು ಶ್ರೀ ನಾರಾಯಣರು. ! ಪ!
ಇದ ಅರಿತರೆ
ಬದುಕಿನ ಮಾರ್ಗ.
ಬಾಳೊಂದು ನೆಮ್ಮದಿಯ ಸ್ವರ್ಗ. !
ಆದಿಕವಿ ಪಂಪನ
ಕನ್ನಡ ಹೊನ್ನುಡಿ ಅಚಲ.
ಮನುಜ ಕುಲ, ತಾನೊಂದೆ ವಲ !ಪ!
✍️ಎನ್. ಮಿಥುನ್ ಜೈನ್
ಕಾಮೆಂಟ್ಗಳು