ಕೇಳುತ್ತಿದ್ದರೆ ಕನ್ನಡ ನುಡಿ
ಮನದಲ್ಲಿ ಹೆಚ್ಚುವುದು ಹರುಷ
ಆಡುತ್ತಿದ್ದರೆ ಆ ಹೊನ್ನುಡಿ
ಆಯಸ್ಸಿನಲಿ ಹೆಚ್ಚಿದಂತೆ ವರುಷ
ಸವಿ ಕನ್ನಡವದು ನನ್ನೆದೆಯ
ಬೆಚ್ಚನೆಯ ಉಸಿರು
ಮನಕೆ ಆನಂದ ನೀಡುವ
ಮೂರುವರೆಯಕ್ಷರದ ಹೆಸರು
ಕನ್ನಡವದು. ಮಾತೆಯ
ಮಮತೆಯ ಮುಗುಳುನಗೆ
ಹರಸುವಳು ಕನ್ನಡಾಂಬೆ
ನಮ್ಮೆಲ್ಲರನು ಹಲವು ಬಗೆ
ಹೆಚ್ಚಾಗಿದ್ದರೆ ನಮ್ಮ ನಡುವೆ
ಕನ್ನಡ, ಭಾಷೆಯ ಬಳಕೆ
ಹಬ್ಬದ ಸಂತಸ, ಸಂಭ್ರಮ
ಆಗುವುದೆಮ್ಮಯ ಮನಕೆ
ನನ್ನ ನಾಡು ಕರುನಾಡೆಂದು
ಹೆಮ್ಮೆಯಿಂದ ಹೇಳುವೆ
ಸಾವಿರ ಜನುಮವಿದ್ದರು
ಕನ್ನಡಿಗನಾಗಿಯೇ ನಾ ಬಾಳುವೆ
✍️*ಎನ್. ಮಿಥುನ್ ಜೈನ್
ಕಾಮೆಂಟ್‌ಗಳು