(ಚಿತ್ರ ಕೃಪೆ :ಜಾಲತಾಣ)
ನಾಯಕರಣ್ಣ ನಾಯಕರು
ಜನ ನಾಯಕರು. !
ಭಾವನೆಗಳನು ಸಮಾಜದಲ್ಲಿ
ತೇಲಿಬಿಟ್ಟವರು !!
ಭರವಸೆಗಳಳ ಬುತ್ತಿಯನೆ
ಬಗೆದು ಕೊಟ್ಟವರು. !
ನಾವುಗಳದನು
ನಂಬಿ ಕೆಟ್ಟವರು. !!
ಮತ ಕೇಳಲು ಕರ ಜೋಡಿಸಿ
ತಲೆ ತಗ್ಗಿಸುವರು !
ಗೆದ್ದರೆ , ಕೈ ಎತ್ತಿ
ಎದೆಯಯ ಹಿಗ್ಗಿಸುವರು !!
ಗೆದ್ದಾಗ ಹೆಜ್ಜೆಗೊಂದು
ಹಿಂಬಾಲಕರು !
ಸೋತಾಗ ಜೊತೆಗಿರುವವರೇ
ನಿಜ ಪಾಲಕರು !!
ಮತದಾನದ ಹೊಸ್ತಿಲಲಿ
ಪ್ರಜೆಯೇ ನಾಯಕ !
ಚುನಾವಣೆ ನಂತರದಲಿ
ಅವನು ಅಮಾಯಕ !!
ಬಲಿಯಾಗುವರು ಇವರಿಗೆ
ಅನೇಕರು !
ಬುದ್ದಿ ವಿವೇಚನೆಗಳ
ಒತ್ತೆ
ಇಟ್ಟವರು !!
ಜನ ನಾಯಕರುಗಳ
ಅಭಿಮಾನಿಗಳಾಗದಿರಿ !
ವಿಚಾರಧಾರೆಗಳ
ವಿಮರ್ಶಕರಾಗಿರಿ. !!
✍️ ಮಿಥುನ್ ಜೈನ್

ಕಾಮೆಂಟ್‌ಗಳು