🕺ಪ್ರಿಯಕರ :-
'ಬಿಳಿಯುಡುಪಿನ ಬೆಡಗಿಯೇ,,
ಇಳೆಯ ಸೌಂದರ್ಯದ ಜೊತೆ ಬೆರೆತಾಗ, ಕಲೆತಾಗ, ಬರುವುದು,
ಅದಕ್ಕೊಂದು ಬೆಲೆ,,,
"ಅಂದ"ಕ್ಕೊಂದು,,, ನೆಲೆ,,
ಆದರೆ,,,😞
ಕಳೆದೋಗಿದೆ ಎನ್ನಯ ಮನ.
ಕೇಳು ಸಖಿ ನನ್ನಂತರಂಗವನ್ನ...
💃ಪ್ರಿಯತಮೆ :-
"ಗೆಳೆಯಾ...
"ಕೆಳೆದೋಗದಂತೆ ಜೋಪಾನವಾಗಿರಿಸಿಕೊಳ್ಳೋ ಕಲೆ, ನಿನ್ನಲ್ಲೇ ಇದೆ"
🕺ಪ್ರಿಯಕರ :-
"ಅರಿಯದಾದೆನು ಇದರ ತಾತ್ಪರ್ಯವನು. !
ಹೇಗೆ ಅರಿಯಲಿ ಸಖಿ.. ಮನದಿಚ್ಚೆಯ ಪರಿಧಿಯನು, ! ಹೇಗೆ ಅರಿಯಲಿ ನಾ...... !
ಹೇಗೆ ಅಳೆಯಲಿ ನಾ......!
ನೀರಿಲ್ಲಿರೋ ಮೀನ ಹೆಜ್ಜೆಯನು.
ಒಗಟಿನಂತಿದೆ ಸಖಿ ನಿನ್ನೀ ಮಾತು !
ಯೋಚಿಸುತಿರುವೆನು ಅರ್ಥೈಸಿಕೊಳ್ಳಲು ಸೋತು !"
💃ಪ್ರಿಯತಮೆ :-
"ಪದೇ ಪದೇ ಸೋಲಬಾರದು ಗೆಳೆಯ...
🕺ಪ್ರಿಯಕರ :-
"ಸೋಲುತ್ತಿರುವುದು ಯಾರು ಗೆಳತಿ ..
💃ಪ್ರಿಯತಮೆ :- (ಮೌನ)
🕺ಪ್ರಿಯಕರ :-
"ಪ್ರಯತ್ನಕ್ಕೆ ಪಲಿಸದ್ದು ಯಾವುದಿದೆ ಗೆಳತಿ ಈ ಜಗದಲ್ಲಿ...? !
ಮಧುರತೆಯೇ ತುಂಬಿರುವುದು ನನ್ನೀ ಮನದಲ್ಲಿ.... !
💃ಪ್ರಿಯತಮೆ :-
"ವ್ಯರ್ಥ ಪ್ರಯತ್ನವೇಕೆ ?
ಮತ್ತೆ ಕಾಲಹರಣವೇಕೆ ?
ನಿಮ್ಮ ಮಧುರತೆಯ ಮನಕೆ ನನ್ನದೊಂದು ನಮನ "
(ಅಡ್ಡ ಗೋಡೆಯ ಮೇಲೆ ದೀಪವಿಟ್ಟಳಾಕೆ.)
ಕೊನೆಗೂ ಅರಿತು ಬಿಟ್ಟನು
ಆಕೆಯ ಮನದಿಂಗಿತವನು
ಪ್ರಿಯಕರನು.
🕺ಪ್ರಿಯಕರ :-
"ಮೇಘದತ್ತ ಹಂಬಲಿಸುವ ನೇಗಿಲ ಯೋಗಿಯಂತೆ !
ಕಾತರದಿ ಕಾದಿರುವೆ.
ಆದರೆ....
ಹತ್ತಿಯ ಹಣ್ಣಿಗೆ ಕಾಯೋ ಹಕ್ಕಿಯಂತೆ !
ಕಾಯಲಾರೆ ಗೆಳತಿ.
ನಿರಾಶೆ ಎಂಬುದು ನನ್ನೀ ಮನಕ್ಕೆ ಶೂನ್ಯಕ್ಕಿಂತ ಸ್ವಲ್ಪ ಹೆಚ್ಚು ಅಷ್ಟೆ.
ಹೋಗಿ ಬನ್ನಿ ಸಖಿ.... 👏
ಮನದಿಂಗಿತವೇ,,,
ವರದಂತೆ, ವಚನದಂತೆ,
ಕೋಟಿ ಭಾರಿ ಶರಣು... "🙏🙏🙏
✍️ ಒಂಟಿ ನಾವಿಕ (Mj)

ಕಾಮೆಂಟ್‌ಗಳು