ಚಿತ್ರವಿದು ವಿ"ಚಿತ್ರ"ವಾಗಿದೆ !
ಅರ್ಥೈಸಲು ಮನ ಸೋತಿದೆ !
ಆಕೃತಿ ಇದು ಚಿತ್ತ ಕಲುಕಿದೆ !
ವಿಕೃತಿ ಇಲ್ಲಿ ಮೇಳೈಸುತ್ತಿದೆ !
ಸಂಸೃತಿಯು ಕಳೆದು ಹೋಗಿದೆ !
ಪ್ರಕೃತಿಯು ಪಾಠ ಕಲಿಸಿದೆ !
ಕಪಟಿ ಮನುಜರ ಚಿತ್ತವೆಲ್ಲಿದೆ !
ನೆಮ್ಮದಿಯು ಮರೀಚಿಕೆಯಾಗಿದೆ !
ಕಷ್ಟವೆಂಬುದು ಮಾಮೂಲಾಗಿದೆ !
ದುಷ್ಟ ಶಿಷ್ಟರ ಜೊತೆಗೆ ಸಾಗಿದೆ !
ಲೋಭಿತನವು ಮೀರಿ ಹೋಗಿದೆ
ಅಲ್ಪ ತನವು ಮೈಗೂಡಿದೆ !
ಧರಣಿಯೆಲ್ಲ ದುರ್ಜನರದಾಗಿದೆ !
ಕೊನೆಗು ಭೂತಾಯಿ ಮುನಿದಿದೆ !
ನಮ್ಮ ತಪ್ಪಿನ ಅರಿವಾಗಿದೆ !
ಆದರೆ, ಕಾಲ ಮೀರಿ ಹೋಗಿದೆ !
✍️ಎನ್. ಮಿಥುನ್ ಜೈನ್.

ಕಾಮೆಂಟ್‌ಗಳು