ಪುತ್ತೂರಿನ ಜಾತ್ರೆಯಲ್ಲಿ,,
ಶಿವನ ಸನ್ನಿಧಾನದಲ್ಲಿ,,
ವರುಷವು ವರುಷವು.
ಜನರಿಗೆಲ್ಲ ಹರುಷವು !!
ಯುಗಾದಿಯ ನಂತರದಲಿ
ಸಂಕ್ರಮಣವು ಅಂತರದಲಿ !
ದೀಪೋತ್ಸವ,, ತೆಪ್ಪೋತ್ಸವ,,
ಕಟ್ಟೆ ಪೂಜೆ,, ರಥೋತ್ಸವ,, !
ಗುಡಿಗಳ ಅಲಂಕಾರ
ರಂಗೋಲಿಯ ಚಿತ್ತಾರ !
ವಾಲಗದ ಝೇಂಕಾರ
ತೋರಣಗಳ ಸಿಂಗಾರ !
ಅನುದಿನವು ಸಂಭ್ರಮದ
ಪೇಟೆ ಸವಾರಿಯು,, !
ದಿನ ದಿನವು ವೈಭವದ
ಕಟ್ಟೆ ಪೂಜೆಯು !
ಪುತ್ತೂರಿನ ಜಾತ್ರೆಯಲ್ಲಿ
ಶಿವನ ಸನ್ನಿಧಾನದಲ್ಲಿ
ವರುಷವು ವರುಷವು
ಜನರಿಗೆಲ್ಲ ಹರುಷವು !!
ಬಲ್ನಾಡಿನ ಉಳ್ಳಾಲ್ತಿಯು
ಭಂಡಾರದ ಜೊತೆಯಲ್ಲಿ
ಪರ ಶಿವನ ಆಲಯದಿ
ಸಂಭ್ರಮದ ಭೇಟಿಯು,,!
ಊರಿನ... ಪರ ಊರಿನ..
ಭಕ್ತರೆಲ್ಲ ಸಾಕ್ಷಿಯು. !
ಕಲ್ಯಾಣಿ ಸುತ್ತ ದೀಪ ಹಚ್ಚಿ
ತೆಪ್ಪದಲ್ಲಿ ಸಾಗಿ ಹೋಗಿ.
ಕೆರೆ ಕಟ್ಟೆ ಪೂಜೆಯು
ಚಂದ್ರ ಮಂಡಲ ಸೇವೆಯು !
ಪುತ್ತೂರಿನ ಜಾತ್ರೆಯಲ್ಲಿ
ಶಿವನ ಸನ್ನಿಧಾನದಲ್ಲಿ
ವರುಷವು ವರುಷವು
ಜನರಿಗೆಲ್ಲ ಹರುಷವು !!
ನವದಿನಗಳ ಜಾತ್ರೆಯು
ಜನ ಜಂಗುಳಿ ಸಂತೆಯು !
ದರ್ಶನ ಬಲಿ ಉತ್ಸವ
ವೈಭವದ ರಥೋತ್ಸವ !
ಅರ್ಚಕರ ಮಂತ್ರಘೋಷ
ಭಕ್ತರ ಜಯಘೋಷ !
ಚೆಂಡೆ ಜಾಗಟೆಯ,ಸದ್ದಿನೊಡನೆ
ಸದ್ದಿನ, ಸುಡು ಮದ್ದಿನೊಡನೆ !
ವರುಷದ ಉತ್ಸವವು
ಅಂದು ಮುಗಿಯಿತು !
ಬ್ರಹ್ಮ ರಥೋತ್ಸವ
ಭಕುತರಿಂದ ಎಳೆಯಲ್ಪಟ್ಟಿತು.!
ಪುತ್ತೂರಿನ ಜಾತ್ರೆಯಲ್ಲಿ
ಶಿವನ ಸನ್ನಿಧಾನದಲ್ಲಿ
ವರುಷವು ವರುಷವು
ಜನರಿಗೆಲ್ಲ ಹರುಷವು !!
ಮರುದಿನವೆ ಜಳಕ್ಕಕ್ಕಾಗಿ
ವೀರ ಮಂಗಲ ದಾರಿಯಾಗಿ !
ನದಿಯಲ್ಲಿ ಮಿಂದು ಬಂದು
ದೇವನಿಗೆ ತೃಪ್ತಿಯಾಗಿ
ಭಕ್ತಿಯಲ್ಲಿ ತೇಲಿ ಹೋಗಿ !
ಕಡೆಯ ದಿನದ ಜಾತ್ರೆಯು
ಸಂಪನ್ನಗೊಂಡಿತು...
ಪುತ್ತೂರ..ಜಾತ್ರೆಯು
ಸಂಪನ್ನ ಗೊಂಡಿತು...!
ಪುತ್ತೂರಿನ ಜಾತ್ರೆಯಲ್ಲಿ
ಶಿವನ ಸನ್ನಿಧಾನದಲ್ಲಿ
ವರುಷವು ವರುಷವು
ಜನರಿಗೆಲ್ಲ ಹರುಷವು !!
✍️ಮಿಥುನ್ ಜೈನ್

ಕಾಮೆಂಟ್‌ಗಳು