"ಕೊರೊನ"ವೆಂಬ
ವೈರಸ್ ಮಹಾಮಾರಿ !
ಹೋಗಲಿ ಜಗದಿಂದ
ಒಮ್ಮೆ ಹಾರಿ !!
ಎಚ್ಚರಿಸುತಿವೆ ಮಾಧ್ಯಮಗಳು
ಸಾರಿ ಸಾರಿ !
ಆಗದಿರಲಿ ಬಡವ ಬಲ್ಲಿದನ
ಬದುಕು ಭಿಕಾರಿ !
ಬೇಡಿ ಕೊಳ್ಳುತಿದೆ ಆಡಳಿತ
ಪರಿ ಪರಿ !
ದಯವಿಟ್ಟು ಅಥೈಸಿಕೊಳ್ಳಿ
ಒಂದು ಬಾರಿ !
"ಕೊರೊನ"ವೆಂಬ
ವೈರಸ್ ಮಹಾಮಾರಿ !
ಹೋಗಲಿ ಜಗದಿಂದ
ಒಮ್ಮೆ ಹಾರಿ !!
ಕಾಯಕವ ದೇವರೆಂದರು
ವೈದ್ಯ, ನರ್ಸ್ ಗಳು !
ಕೇಳದೆ ರಜೆ ಕೊಟ್ಟರು
ಎಲ್ಲರ ಬಾಸ್ಗಳು !
ನಮ್ಮವರ ರಕ್ಷಣೆಗೆ
ಆಡಳಿತ ಪೊಲೀಸ್ಗಳು !
ತೆಪ್ಪಗೆ ಮನೆಯೊಳಗಿರಿ
ಸ್ವಲ್ಪ ದಿನಗಳು !
"ಕೊರೊನ"ವೆಂಬ
ವೈರಸ್ ಮಹಾಮಾರಿ !
ಹೋಗಲಿ ಜಗದಿಂದ
ಒಮ್ಮೆ ಹಾರಿ !!
ಎಲ್ಲಿ ಕೇಳಿದರೀಗ
ಕೋವಿಡ್ ಕೊರೊನಾ !
ಹೇಗೆ ತಡೆಯುವುದು
ಈ ಮಹಾ ರೋಗಾನ !
ಮೊದಲೆ ತಡೆಯಬಹುದಿತ್ತು
ಊರೊಳಗೆ ಇದನ್ನಾ !
ಬಂದಾಗಿದೆ ಇನ್ನೂ
ಅಂತರದಲ್ಲಿರಲಿ ಗಮನ !
"ಕೊರೊನ"ವೆಂಬ
ವೈರಸ್ ಮಹಾಮಾರಿ !
ಹೋಗಲಿ ಜಗದಿಂದ
ಒಮ್ಮೆ ಹಾರಿ !!
✍️ಮಿಥುನ್ ಜೈನ್

ಕಾಮೆಂಟ್‌ಗಳು