Images ©Ben Amaral
ಹಾರಿ ಹೋಯಿತು ಹಕ್ಕಿ
ನಾ ಕಟ್ಟಿದ ಹಳೆಯ ಗೂಡಿನಿಂದ !
ಹೊಂಚು ಹಾಕುತಿದ್ದರು
ಕೆಲ ಬೇಟೆಗಾರರು ಬಿರುಸಿನಿಂದ !!
ಪಂಜರದಂತಿರಲಿಲ್ಲ ನಿನಗೆ
ನಾ ಕಟ್ಟಿದ ಸುಂದರ ಗೂಡು !
ನೀನಿಲ್ಲದೆ ಅದು ಈಗ
ಖಾಲಿಯಾಗಿರುವುದು ನೋಡು !!
ನೀ ಬಲಿಯಾದೆ ನಿನ್ನವರ ಬಲವಂತಕ್ಕೆ ಕಟ್ಟುಬಿದ್ದು !
ಮುರಿದು ಹೋಯಿತಲ್ಲ
ನಮ್ಮ ಗೆಳೆತನವು ಮುದ್ದು !!
ಹಾರಿ ಹೋಯಿತು ಹಕ್ಕಿ
ನಾ ಕಟ್ಟಿದ ಹಳೆಯ ಗೂಡಿನಿಂದ !
ಹೊಂಚು ಹಾಕುತಿದ್ದರು
ಕೆಲ ಬೇಟೆಗಾರರು ಬಿರುಸಿನಿಂದ !!
ಬಿಟ್ಟು ಹೋದೆಯಲ್ಲ ಮರಿ
ನಿನಗೇನು ಗೊತ್ತು ನನ್ನ ಪಾಡು. !
ಗುನುಗುತಿರುವೆ ನಾ ಬರೀ
ನಿನ್ನ ನೆನಪು ತುಂಬಿರುವ ಹಾಡು. !!
ಕಂಬನಿಗೆರೆದೆ ನಾನು
ನೆನಪಿನ ಪುಕ್ಕಗಳ ನೋಡಿ !
ನಿನ್ನವರ ಇಷ್ಟಕ್ಕಾಗಿ
ಯಾರಾದನೋ ನಿನಗೆ ಜೋಡಿ. !!
ಹಾರಿ ಹೋಯಿತು ಹಕ್ಕಿ
ನಾ ಕಟ್ಟಿದ ಹಳೆಯ ಗೂಡಿನಿಂದ !
ಹೊಂಚು ಹಾಕುತಿದ್ದರು
ಕೆಲ ಬೇಟೆಗಾರರು ಬಿರುಸಿನಿಂದ !!
✍️ ಒಂಟಿ ನಾವಿಕ MJ

ಕಾಮೆಂಟ್‌ಗಳು