ಪೆಣ್ಣೆಂದರೆ
ಪಿಂಕಿಯಂತಿರಬೇಕು
ಪಚ್ಚೆ ಸೀರೆಯಲಿ
ಮಿಂಚುತಿರಬೇಕು !!
ಮಿತ ಭಾಷಿ
ಯಾಗಿರುವಾಕೆಯು
ಹಿತವನ್ನು
ಬಯಸುವಾಕೆಯು !
ಸ್ವೇಚ್ಚೆಯನು
ದೂರವಿಟ್ಟವಳು
ತನ್ನಿಚ್ಚೆಯಂತೆ
ನಡೆಯುವಳು !
ಪೆಣ್ಣೆಂದರೆ
ಪಿಂಕಿಯಂತಿರಬೇಕು
ಪಚ್ಚೆ ಸೀರೆಯಲಿ
ಮಿಂಚುತಿರಬೇಕು !!
ಗೆಳೆತನಕೆ
ಕೈ ಮುಗಿವೆ ನಾನು
ಮೃದು ಮನಕೆ
ಮರುಳಾದೆ ನಾನು !
ಓ ಪಿಂಕಿ
"ಪ್ರಸನ್ನ " ವದನೆ,
ನಿನ ಚೆಲುವಿಗೆ
ನಾ ಶರಣಾದೆನೆ !
ಪೆಣ್ಣೆಂದರೆ
ಪಿಂಕಿಯಂತಿರಬೇಕು
ಪಚ್ಚೆ ಸೀರೆಯಲಿ
ಮಿಂಚುತಿರಬೇಕು !!

ಕಾಮೆಂಟ್‌ಗಳು