ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾರಿ ಹೋದ ಹಕ್ಕಿ

                Images © Ben Amaral ಹಾರಿ ಹೋಯಿತು ಹಕ್ಕಿ  ನಾ ಕಟ್ಟಿದ ಹಳೆಯ ಗೂಡಿನಿಂದ ! ಹೊಂಚು ಹಾಕುತಿದ್ದರು  ಕೆಲ ಬೇಟೆಗಾರರು ಬಿರುಸಿನಿಂದ !! ಪಂಜರದಂತಿರಲಿಲ್ಲ ನಿನಗೆ   ನಾ ಕಟ್ಟಿದ ಸುಂದರ ಗೂಡು ! ನೀನಿಲ್ಲದೆ ಅದು ಈಗ  ಖಾಲಿಯಾಗಿರುವುದು ನೋಡು !! ನೀ ಬಲಿಯಾದೆ ನಿನ್ನವರ ಬಲವಂತಕ್ಕೆ ಕಟ್ಟುಬಿದ್ದು ! ಮುರಿದು ಹೋಯಿತಲ್ಲ  ನಮ್ಮ ಗೆಳೆತನವು ಮುದ್ದು !! ಹಾರಿ ಹೋಯಿತು ಹಕ್ಕಿ  ನಾ ಕಟ್ಟಿದ ಹಳೆಯ ಗೂಡಿನಿಂದ ! ಹೊಂಚು ಹಾಕುತಿದ್ದರು  ಕೆಲ ಬೇಟೆಗಾರರು ಬಿರುಸಿನಿಂದ !! ಬಿಟ್ಟು ಹೋದೆಯಲ್ಲ ಮರಿ  ನಿನಗೇನು ಗೊತ್ತು ನನ್ನ ಪಾಡು. ! ಗುನುಗುತಿರುವೆ ನಾ ಬರೀ  ನಿನ್ನ ನೆನಪು ತುಂಬಿರುವ ಹಾಡು. !! ಕಂಬನಿಗೆರೆದೆ ನಾನು  ನೆನಪಿನ ಪುಕ್ಕಗಳ ನೋಡಿ !  ನಿನ್ನವರ ಇಷ್ಟಕ್ಕಾಗಿ  ಯಾರಾದನೋ ನಿನಗೆ ಜೋಡಿ. !! ಹಾರಿ ಹೋಯಿತು ಹಕ್ಕಿ  ನಾ ಕಟ್ಟಿದ ಹಳೆಯ ಗೂಡಿನಿಂದ ! ಹೊಂಚು ಹಾಕುತಿದ್ದರು  ಕೆಲ ಬೇಟೆಗಾರರು ಬಿರುಸಿನಿಂದ !!                                                         ✍️ ಒಂಟಿ ನಾವಿಕ MJ

ಕರೋನ, ಕೃಷಿ ಮತ್ತು ರೈತ

© @David Marcu ಇಂದಿನ ಪರಿಸ್ಥಿತಿ ನೋಡಿದಾಗ. ನನಗೆ ಅನಿಸುತ್ತದೆ. ‌‌ ರೈತನು ದವಸ ಧಾನ್ಯ ಹಣ್ಣು ಹಂಪಲು ಗಳನ್ನು ಬೆಳೆಯದೆ ಇದ್ದರೆ ಏನಾಗುತಿತ್ತು?. ನಮ್ಮೆಲ್ಲರ ಪರಿಸ್ಥಿತಿ ಓಮ್ಮೆ ಯೋಚಿಸಿ .ಎಲ್ಲಾ ಸಂದರ್ಭದಲ್ಲಿ ಹಣ ಅಂತಸ್ತು ಉಪಯೋಗಕ್ಕೆ ಬರುದಿಲ್ಲ. ಇಂದು ಎಲ್ಲಾ ಇದ್ದು ಏನೂ ಇಲ್ಲಾದೆ ಮನೆಯಲ್ಲಿ ಕೈ ಕಟ್ಟಿ ಕುರುವ ಸನ್ನಿವೇಶ ಒದಗಿಬಂದಿದೆ. ಯಾರು ಊಹಿಸಿರಲಿಲ್ಲ ಇಂಥ ಒಂದು ಕಾಲ ಬರುತ್ತದೆ ಎಂದು . ಅದ್ದರಿಂದ ಇನ್ನಾದರು ಅನ್ನ ನೀಡುವ ಅನ್ನದಾತನನ್ನು ಊಟಕ್ಕೆ ಮೊದಲು ನೆನೆಯೊಣ ಮತ್ತು ಗೌರವಿಸೋಣ.. ಅದ್ದರಿಂದ ಈ ಜಗತ್ತಿನಲ್ಲಿ ನಲ್ಲಿ ಯಾವುದೇ ವೃತ್ತಿ ಮೇಲು ಅಲ್ಲ ಕೀಳು ಅಲ್ಲ ನಾವು ನೋಡುವ ದೃಷ್ಟಿ ಕೋನ ಬದಲಾಗ ಬೇಕಿದೆ, ಈ ಕಾಲ ನಿರಂತರ ಬದಲಾವಣೆ ಪ್ರಕ್ರಿಯೆಗೆ ಒಳಗಾಗುವಂತದ್ದು . ಇಲ್ಲಿ ಎಲ್ಲಾವು ಭಂಗವಂತನ ಅಣತಿಯಂತೆ ನಡೆಯುತ್ತದೆ ನಾವು ಕೇವಲ ನೆಪಮಾತ್ರ ಆದರೆ ಎಲ್ಲಾ ರು ಅಧುನಿಕ ಜೀವನದ ಅತುರದಲ್ಲಿ ಹಣಗಳಿಸುವ ನೆವದಲ್ಲಿ ಒಂದಲ್ಲ ಒಂದು ಕಾರ್ಯ ದಲ್ಲಿ ನಿರತರಾಗಿದ್ದಾರು ಆದರೆ ಯಾರು ಊಹಿಸದ  ಮಹಾಮರಿ ಕರೋನ ಕ್ಷಣಾರ್ಧದಲ್ಲಿ ಎಲ್ಲರನ್ನೂ ಮನೆ ಒಳಗೆ ಕಟ್ಟಿ ಹಾಕಿದೆ ಆದರೆ ಎಲ್ಲರು ಕೊನೆ ಗಳಿಗೆಯಲ್ಲಿ ಬಂದು ಸೇರಿದ್ದು ಮಾತ್ರ ಹಳ್ಳಿಗೆ ಹಳ್ಳಿಯಲ್ಲಿ ಹೇಗಾದರು ಸೊಪ್ಪು-ಸದೆ ತಿಂದಾದರು ನಾಲ್ಕುದಿನ ಬದುಕು ಸಾಗಿಸಬಹುದು ಎಂದು  ... ಆದ್ದರಿಂದ ಎಲ್ಲದಕ್ಕೂ ಮೂಲ ಕೃಷಿ ಮತ್ತು ರೈತ... ನಮೋ ಅನ್ನದಾತ. -ಇದು ನನ್ನ ಅನಿಸಿಕೆ.. ...

ಕೊರೊನವೆಂಬ ವೈರಸ್ ಮಹಾಮಾರಿ

"ಕೊರೊನ"ವೆಂಬ  ವೈರಸ್  ಮಹಾಮಾರಿ ! ಹೋಗಲಿ ಜಗದಿಂದ  ಒಮ್ಮೆ ಹಾರಿ    !! ಎಚ್ಚರಿಸುತಿವೆ ಮಾಧ್ಯಮಗಳು     ಸಾರಿ ಸಾರಿ   ! ಆಗದಿರಲಿ ಬಡವ ಬಲ್ಲಿದನ  ಬದುಕು ಭಿಕಾರಿ   ! ಬೇಡಿ ಕೊಳ್ಳುತಿದೆ ಆಡಳಿತ  ಪರಿ ಪರಿ   ! ದಯವಿಟ್ಟು ಅಥೈಸಿಕೊಳ್ಳಿ  ಒಂದು ಬಾರಿ  ! "ಕೊರೊನ"ವೆಂಬ  ವೈರಸ್ ಮಹಾಮಾರಿ    ! ಹೋಗಲಿ ಜಗದಿಂದ  ಒಮ್ಮೆ ಹಾರಿ    !! ಕಾಯಕವ  ದೇವರೆಂದರು  ವೈದ್ಯ,  ನರ್ಸ್ ಗಳು   ! ಕೇಳದೆ ರಜೆ ಕೊಟ್ಟರು  ಎಲ್ಲರ ಬಾಸ್ಗಳು   ! ನಮ್ಮವರ ರಕ್ಷಣೆಗೆ  ಆಡಳಿತ ಪೊಲೀಸ್ಗಳು  ! ತೆಪ್ಪಗೆ ಮನೆಯೊಳಗಿರಿ  ಸ್ವಲ್ಪ ದಿನಗಳು   ! "ಕೊರೊನ"ವೆಂಬ   ವೈರಸ್ ಮಹಾಮಾರಿ  ! ಹೋಗಲಿ ಜಗದಿಂದ  ಒಮ್ಮೆ ಹಾರಿ   !! ಎಲ್ಲಿ ಕೇಳಿದರೀಗ  ಕೋವಿಡ್ ಕೊರೊನಾ  ! ಹೇಗೆ ತಡೆಯುವುದು  ಈ ಮಹಾ ರೋಗಾನ   ! ಮೊದಲೆ ತಡೆಯಬಹುದಿತ್ತು  ಊರೊಳಗೆ ಇದನ್ನಾ  ! ಬಂದಾಗಿದೆ ಇನ್ನೂ  ಅಂತರದಲ್ಲಿರಲಿ  ಗಮನ  ! "ಕೊರೊನ"ವೆಂಬ  ವೈರಸ್ ಮಹಾಮಾರಿ    ! ಹೋಗಲಿ ಜಗದಿಂದ  ಒಮ್ಮೆ ಹಾರಿ     !!   ...

ಪೆಣ್ಣೆಂದರೆ ಪಿಂಕಿ

ಪೆಣ್ಣೆಂದರೆ ಪಿಂಕಿಯಂತಿರಬೇಕು   ಪಚ್ಚೆ ಸೀರೆಯಲಿ ಮಿಂಚುತಿರಬೇಕು !!  ಮಿತ ಭಾಷಿ ಯಾಗಿರುವಾಕೆಯು  ಹಿತವನ್ನು ಬಯಸುವಾಕೆಯು !   ಸ್ವೇಚ್ಚೆಯನು ದೂರವಿಟ್ಟವಳು  ತನ್ನಿಚ್ಚೆಯಂತೆ ನಡೆಯುವಳು !   ಪೆಣ್ಣೆಂದರೆ ಪಿಂಕಿಯಂತಿರಬೇಕು  ಪಚ್ಚೆ ಸೀರೆಯಲಿ ಮಿಂಚುತಿರಬೇಕು !!   ಗೆಳೆತನಕೆ ಕೈ ಮುಗಿವೆ ನಾನು   ಮೃದು ಮನಕೆ ಮರುಳಾದೆ ನಾನು !   ಓ ಪಿಂಕಿ "ಪ್ರಸನ್ನ " ವದನೆ,   ನಿನ ಚೆಲುವಿಗೆ ನಾ ಶರಣಾದೆನೆ !  ಪೆಣ್ಣೆಂದರೆ ಪಿಂಕಿಯಂತಿರಬೇಕು   ಪಚ್ಚೆ ಸೀರೆಯಲಿ ಮಿಂಚುತಿರಬೇಕು !!   ✍️ MJ (ಚಿತ್ರ ಕೃಪೆ :Rajwadi.Com)