ಕಾಯಕದಿ ಕಾಣುತಿದೆ
ಒಂದು ಸುಂದರ ಕಲೆ !
ಕಟ್ಟಲಾಗದು ಎಂದಿಗು
ಅದಕ್ಕೊಂದು ಬೆಲೆ !೧!
ಮುದ್ದು ಗೊಂಬೆಯು
ಇದು ಶಿಲ್ಪಿಯಾ ಕೈಚಳಕ !
ಅದ ನೋಡಿದವರ
ಮೈ ಮನವು ಪುಳಕ !
ನೀಲ ಜಡೆಯಲಿ
ಕಂಗೊಳಿಸುತಿಹ ಲಲನೆ !
ನಿನ್ನ ಸೌಂದರ್ಯಕೆ ನಾ
ಸೋತು ಶರಣಾದೆನೆ !
ಕಾಯಕದಿ ಕಾಣುತಿದೆ
ಒಂದು ಸುಂದರ ಕಲೆ!
ಕಟ್ಟಲಾಗದು ಎಂದಿಗು
ಅದಕ್ಕೊಂದು ಬೆಲೆ !೨!
ಆರ ನೋಡುವಿ ನೀನು
ಕದ ತೆರೆದು ಇಣುಕಿ !
ನೋಡುಗನ ಮನದ
ರಸಿಕತೆಯ ಕೆಣಕಿ !
ಕರೆಯುವೆಯ ನಿನ್ನ
ಮನೆಯೊಳಗೆ ನನ್ನ !
ತುಸು ಜಾಗ ಮಾಡಿಕೊಡು
ಮನದೊಳಗೆ ಚಿನ್ನ !
ಕಾಯಕದಿ ಕಾಣುತಿದೆ
ಒಂದು ಸುಂದರ ಕಲೆ !
ಕಟ್ಟಲಾಗದು ಎಂದಿಗು
ಅದಕ್ಕೊಂದು ಬೆಲೆ !೩!
✍️ ಮಿಥುನ್ ಜೈನ್

ಕಾಮೆಂಟ್‌ಗಳು