ಬದುಕೊಂದು ಮೂರು
ದಿನಗಳ ಸಂತೆ !
ಅಲ್ಲಿರುವುದು ಕಷ್ಟ
ಸುಖಗಳ ಚಿಂತೆ !!
ಬಿರು ಬೇಸಿಗೆಯಲಿ
ನೀರಿಲ್ಲದೆ ಪರದಾಟ !
ಭಾರಿ ಮಳೆಯಲಿ ನೆರೆಗೆ
ತತ್ತರಿಸಿ ಅರಚಾಟ. !!
ಮಿತಿ ಮೀರಿದಾಗ
ಮನುಜನ ವಿಕೃತಿಯು !
ಮುನಿಯುವುದು
ಸುಂದರ ಪ್ರಕೃತಿಯು !!
ಬದುಕೊಂದು ಮೂರು
ದಿನಗಳ ಸಂತೆ !
ಅಲ್ಲಿರುವುದು ಕಷ್ಟ
ಸುಖಗಳ ಚಿಂತೆ !!
ತಪ್ಪೆಸಗಿಲ್ಲದ ಮೂಗ
ಪ್ರಾಣೆಗಳು, !
ತೆಪ್ಪಗೆ ಬದುಕುತಿಹ
ಕಾಡು ಜೀವಿಗಳು, !!
ಪ್ರಕೃತಿ ನೇಸರನ ಮಧ್ಯೆ
ಸಂಘರ್ಷವೊ ವಿರಸವೊ !
ಇಳೆಗೆ, ಮುಗಿಲ ಮೋಡದ
ಬಿರುಸಾದ ಸ್ಪರ್ಶವೊ !!
ಬದುಕೊಂದು ಮೂರು
ದಿನಗಳ ಸಂತೆ !
ಅಲ್ಲಿರುವುದು ಕಷ್ಟ
ಸುಖಗಳ ಚಿಂತೆ !!
ನದಿ, ಕೆರೆ, ತೊರೆಗಳ
ಅಕ್ರಮಿಸದಿರು ಮನುಜ !
ಮತ್ತೆ ನೆರೆ ಬಂದಾಗ
ಅತಂತ್ರವಾಗುವುದು ಸಹಜ !!
ಭಾರಿ ಯಂತ್ರಗಳ
ಅತಿಯಾಗಿ ಬಳಸದಿರು !
ಜೀವನದ ನೆಮ್ಮದಿಯ
ಹಾಳು ಮಾಡದಿರು !!
ಬದುಕೊಂದು ಮೂರು
ದಿನಗಳ ಸಂತೆ !
ಅಲ್ಲಿರುವುದು ಕಷ್ಟ
ಸುಖಗಳ ಚಿಂತೆ !!
✍️ ಎನ್. ಮಿಥುನ್ ಜೈನ್

ಕಾಮೆಂಟ್‌ಗಳು