ತರಗೆಲೆಯ ಮಧ್ಯೆ
ಬುವಿಯಿಂದ ಮೇಲೆದ್ದು ಬಂಧು,
ಶ್ವೇತ ರಾಣಿಯಂತೆ,,
ಛತ್ರ ಚಾಮರದಂತೆ,,
ಕಂಗೊಳಿಸುತಿಹ,
ನಿನಗಾರು ಸಾಟಿ.
ಎಲೆ ಅಣಬೆಯೆ ಅಣಕಿಸದಿರು,
ನಿನಗಾರು,,
ಸಾಟಿಯಿಲ್ಲವೆಂದು. !!
ಚಪ್ಪರಿಸುವ,
ಮನುಜಗೆ ಆಹಾರವಾದೆ,
ಶಾಕಾಹಾರಿಗೆ
ನೀ ದೂರವಾದೆ,
ಉತ್ತದೆ ಬಿತ್ತದೆ ಬೆಳೆಯುವೆ ನೀನು,
ಗುಡುಗು ಸಿಡಿಲಿಗೆ ಸೃಷ್ಟಿಯಾಗುವಿಯಂತೆ,,
ಎಲೆ ಅಣಬೆಯೆ ಅಣಕಿಸದಿರು
ನಿನಗಾರು,,
ಸಾಟಿಯಿಲ್ಲವೆಂದು !!
ಕರೆಯುವರು ನಿನ್ನ
ನಾಯಿಕೊಡೆಯೆಂದು.
ಯಾರು ನೋಡಿಲ್ಲ,
ನಾಯಿ ಹಿಡಿದದ್ದು ಎಂದು.
ಕೊಳೆತೆಲೆ ಬೈ ಹುಲ್ಲಲಿ
ಹುಟ್ಟುವ ನೀ, ಹಸಿದವರ ಬಂದು.
ಎಲೆ ಅಣಬೆಯೆ ಅಣಕಿಸದಿರು
ನಿನಗಾರು,,,
ಸಾಟಿಯಿಲ್ಲವೆಂದು !!
ಸೃಷ್ಟಿಯ ಮಾಯಾವಿ ನೀನು,
ಪ್ರಕೃತಿಯ ಸೊಬಗಿಗೆ
ನಿನದೊಂದು ಕಾಣಿಕೆ,
ಕರಗುವ ಮುನ್ನ ಬಿತ್ತರಿಸುವೆ
ಈ ನಿನ್ನ,
ಸೌಂದರ್ಯವನ್ನ,
ಎಲೆ ಅಣಬೆಯೆ ಅಣಕಿಸದಿರು
ನಿನಗಾರು,,,,
ಸಾಟಿಯಿಲ್ಲವೆಂದು !!
- (ಮಿಥುನ್ ಜೈನ್)

ಕಾಮೆಂಟ್‌ಗಳು