ಸುಂದರ ಹುಡುಗಿಯ
ಅಂದದ ಸೌಂದರ್ಯದ ಮಧ್ಯೆ,.
ಕಳೆದು ಹೋದೆ ನಾನು.
ಬರಿದಾದ ಹೃದಯದಲಿ
ಬೆಚ್ಚಗೆ ಮುಚ್ಚಿಟ್ಟು
ಮೆತ್ತಗೆ ಕಾವು ಕೊಟ್ಟು
ಪೊರೆಯುವ ದೊಡ್ಡದೊಂದು ಆಸೆ.
ಆಸೆಗೆ ಕೊನೆಯಿಲ್ಲ
ಪ್ರೇಮಕ್ಕೆ ಅಂತ್ಯವಿಲ್ಲ.
ಪ್ರೀತಿಯೆಂಬ ಮಾಯೆಯ ಬಳಿ,
ಕಳೆದು ಹೋದೆ ನಾನು.
ಮತ್ತೆ ಹುಡುಕಲಾರಿರಿ ನೀವು.
ಸವಿ ಮಾತು, ಕುಡಿ ನೋಟ,
ಸುಂದರ ಹೃದಯಗಳ ಸಮ್ಮಿಲನ,
ಪ್ರೀತಿಸುವ ಹೃದಯಲಿ ಜಾಗವಿದೆಯೊ
ಹರಸಿ ಹಾರೈಸುವ ಕೈಗಳು,
ಕಟ್ಟಿ ನಿಂತಿವೆಯೊ,
ಕಾದು ನೋಡುವೆನು ಕಾಲನ ಮುಂದೆ
(ಮಿಥುನ್ ಜೈನ್)

ಕಾಮೆಂಟ್‌ಗಳು