ಕನ್ನಡದ ಭಾಷೆ ನಮ್ಮ ಹೃದಯದ ಭಾಷೆ .
ಭಾಷೆ ಒಂದು ಸಾಧನ ಅದು ನಿಂತ ನೀರಲ್ಲ ಅದು ಹರಿಯುವ ನೀರು ಇದು ನಿರಂತರವಾಗಿ ಬದಲಾಣೆಗೆ ಒಳಪಡುತದೆ. ಭಾಷೆಗೆ ಒಂದು ವಿಷೇಶ ಸ್ಥಾನವಿದೆ ಅದು ತಾಯಿ ಮಗುವಿಗು ಇರುವ ಭಾಂದವ್ಯ ದಂತೆ ವ್ಯಕ್ತಿಗು ಮತ್ತು ಆತನ ಮಾತ್ತೃಭಾಷೆಗೂ ಈ ರೀತಿಯ ನಂಟಿದೆ. ಭಾಷೆಯನ್ನು ಬಳಸಿದಷ್ಟು ಅದು ಬೆಳೆಯುತ್ತ ಹೊಗುತದೆ . ಮಾತೃ ಭಾಷೆಯನ್ನು ಗೌರವಿಸಿದರೆ ಹೆತ್ತ ತಾಯುಯನು ಗೌರವಿಸಿದಂತೆ ,ಮಾತೃ ಭಾಷೆಯೂ ಕರುಳ ಬಳ್ಳಿಯ ಸಂಬಂದಂತೆ, ಮಾತ್ತೃಭಾಷೆ ನಮ್ಮ ದೆಹದಲ್ಲಿ ರಕ್ತ ಗತವಾಗಿದೆ ಇದು ಹ್ಹೃದಯದ ನಾಡಿ ಮಿಡಿತದಂತೆ, ನಮ್ಮ ಹೃದಯದ ಭಾಷೆ ,ನಮ್ಮ ಉಸಿರಿನ ಭಾಷೆಯೂ ಆಗಿ ನಮ್ಮ ಲ್ಲಿ ಹಾಸುಹೊಕ್ಕಾಗಿದೆ .ಈ ಭಾಷೆಯನ್ನು ಹೆಚ್ಚಾಗಿ ಸಂವನ ಮಾದ್ಯಮವಾಗಿ ಬಳಸಿದ್ದೆ ಅದಲ್ಲಿ ಭಾಷೆ
ಅಳಿವಿನ ಅಂಚಿಗೆ ಮುಟ್ಟಲು ಎಂದಿಗೂ ಸಾಧ್ಯ ವಿಲ್ಲ. ಈ ಮೂಲಕ ಇಂದಿನ ಅದುನಿಕ ಜೀವನದ ಭರಾಟೆಯಲ್ಲಿ ಸಾಮಾನ್ಯವಾಗಿ ಅನ್ಯ ಭಾಷೆಯೊಂದು ನಮ್ಮ ಭಾರತೀಯ ಎಲ್ಲಾ ಪ್ರದೇಶಿಕ ಭಾಷೆಗಳ ಸ್ಥಾನವನ್ನು ಈ ಅನ್ಯ ಭಾಷೆ ಹವ್ಯಾತವಾಗಿ ಆಕ್ರಮಿಸುತಿದೆ ಇದು ಹೇಗೆಂದರೆ ಪ್ರತಿ ನಿತ್ಯ ಆಡು ಮಾತು ಬೆಳಿಗ್ಗೆ ಎದ್ದಾಗ ಆರಂಭವಾಗಿ ರಾತ್ರಿಯ ಶುಭಾಷಯಗಳು ಅನ್ಯ ಭಾಷೆಯಲ್ಲಯೇ ನಡೆಯುತಿದೆ ಆತ್ಮೀಯರೇ ಇದು ಹೀಗೆಯೆ ಮುಂದುವರಿದರೆ ನಮ್ಮ ಮಾತೃಭಾಷೆಯ ನಾಶಕ್ಕೆ ನಾವೆ ತೀಲಾಂಜಲಿ ಇಟ್ಟಂತಾಗುತದೆ. ಅದ್ದರಿಂದ ಪ್ರತಿಯೊಬ್ಬರು ಕೂಡ ಅತ್ಯಂತ ಜವಾಬ್ದಾರಿಯೀಂದ ಮಾತೃಭಾಷೆಯನ್ನು ಬಳಸಿ,ಬೆಳೆಸಿ ಗೌರವಿಸಿ ಉಳಿಸಿದರೆ ಮಾತ್ರ ನಮ್ಮಮಾತೃ ಭಾಷೆ ಜೀವಂತವಾಗಿ ಉಳಿದು ಬೆಳೆಯಲು ಸಾದ್ಯ... ಬನ್ನೀ ಸ್ನೇಹಿತರೆ ಇಂದೆ ಸಂಕಲ್ಪ ಮಾಡೋಣ ನಮ್ಮ ಮಾತೃ ಭಾಷೆ ಉಳಿವಿಗಾಗಿ ಕೈ ಜೋಡಿಸೋಣ

ಕಾಮೆಂಟ್‌ಗಳು