ನಮ್ಮ ಪೋಷಕರನ್ನು ಗೌರವಿಸೋಣ ,ನಿಜವಾಗಿ ಹೇಳಬೇಕು ಅನಿಸುತಿದೆ ಏಕೆಂದರೆ ಅಪ್ಪ ಅಮ್ಮನ ಋಣವನ್ನು. ಏಳು ಜನ್ಮದಲ್ಲಿ ತೀರಿಸಲು ಸಾದ್ಯ ವಿಲ್ಲ ಅಮ್ಮ ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹಿದ್ದಾಳೆ ಅವಳ ಕಾಳಜಿ ಹೆಗಿರುತ್ತೆ ಎಂದರೆ ಪ್ರತಿಕ್ಷಣ ನಿದ್ದೆ ಮಾಡದೆ ಎಚ್ಚರಿಕೆಯಲ್ಲಿದ್ದು ಸಾದಾ ಪೋಷಣೆ ಯಲ್ಲಿ ತೊಡಗಿರುವಳು ಅಮ್ಮ ಮಗುವಿನ ಬಾಲ್ಯದಿಂದ ಹಿಡಿದು ಯವ್ವನದವರೆಗು ಊಟ, ನಿದ್ದೆ, ಬುಧ್ದಿ ವಿದ್ಯೆ, ಮರ್ಗದರ್ಶನ ದಲ್ಲಿ ಅತೀ ಎಚ್ಚರಿಕೆಯಿಂದ ಸಲಹುವಳು ಅಮ್ಮ .ಮತ್ತು ಇಷ್ಟೆಲ್ಲ ಅಮ್ಮ ಮಾಡಿದರೆ ಇನ್ನು ಅಪ್ಪ ನ್ನ ಕಾರ್ಯವೈಕರಿ ಹೇಳಲೇ ಬೇಕು ಅಮ್ಮ ಮನೆಯೊಳಗೆ ದುಡಿದರೆ ಅಪ್ಪ ಹಗಲು ರಾತ್ರಿ ಎನ್ನದೆ ಹೊರಗೆ ಗಾಳಿ ಚಳಿ ಬಿಸಿಲು ಎನ್ನದೆ ಅಯಾಸ ಬಾಯರಿಕೆ ಹಸಿವು ಇವೆಲ್ಲಾವನ್ನು ಲೆಕ್ಕಿಸದೆ ತನ್ನ ದೇಹವನ್ನು ಸವೆಸಿ ತನ್ನ ಕುಟುಂಬ ವನ್ನು ಸಲಹುವನು ಅಪ್ಪ .ನಮ್ಮ ಈ ಬಡತನದಲ್ಲಿ ವಿದ್ಯಭ್ಯಾಸ ಬಟ್ಟೆ,ಪುಸ್ತಕ, ಫೀಜು ಎಲ್ಲಾವನ್ಮು ಅಪ್ಪ ದುಡಿದು ಕಿಂಚಿತ್ತು ತೊಂದರೆ ಯೊಗದಂತೆ ನಿಗವಹಿಸಿ ನೋಡಿಕೋಳ್ಳುತಿದ್ದ ,ಇನ್ನೇನು ಅಪ್ಪ-ಅಮ್ಮ ವಯಸ್ಸು ಅದಂತೆ ಅವರ ದೇಹದ ಶಕ್ತಿ ಕಂದಿ ರೋಗಕ್ಕೆ ತುತ್ತಾದಾಗ ಮಕ್ಕಳು ಎಷ್ಟು ಪ್ರೀತಿಯೀಂದ ನೋಡಿಕೋಂಡು ಹಾರೈಕೆ ಮಾಡುತ್ತಾರೆ ಎಂದು ಯೋಚಿಸುವ.ಅಪ್ಪ ಅಮ್ಮ ..ಆದರೆ ಎಷ್ಷೋ ಮಕ್ಕಳಿಗೆ ಅಪ್ಪ ಅಮ್ಮನ ಮಾತು ಕೇಳುವ ಅವರ ಸೇವೆ ಮೊಡುವ ಭಾಗ್ಯವಿಲ್ಲ ..ಆದರೆ.ಗೆಳೆಯರೆ ಯಾವುದೇ ವಸ್ತು ನಮ್ಮ ಬಳಿ ಇದ್ದಾಗ ಅದರ ಬೆಲೆ ನಮಗೆ ಅರಿವೇ ಅಗುವುದಿಲ್ಲ ಅದರೆ ಅದನ್ನು ಕಳೆದುಕೊಂಡಾಗ ಮಾತ್ರ ಅದರ ನಿಜವಾದ ಬೆಲೆ ನಮಗೆ ಅರಿವಾಗುವುದು. ಅದ್ದರಿಂದ ಅಪ್ಪ ಅಮ್ಮ ನ್ನು ಪ್ರೀತೀಸೋಣ,ಗೌರವಿಸೋಣ ಅವರ ವೃದ್ಧಪ್ಯದ ಸಮಯದಲ್ಲಿ ಅವರ ಆರೋಗ್ಯ ಮತ್ತು ಅವರ ಆಸೆ.ಆಕಾಂಕ್ಷೆ ಗಳಿಗೆ ಆಸರೆಯಾಗಿ ಅವರ ಅಭೀಷ್ಟೆಯನ್ನು ಇಡೇರಿಸುವ ಮೂಲಕ ಈ ಮೂಲಕ ಅವರ ಋಣವನ್ನು ತೀರಿಸಲು ಪ್ರಯತ್ನಿಸೋಣ .ಆತ್ಮೀಯರೆ ನೀವು ಜೀವನದಲ್ಲಿ ಯಾರಿಗೂ ಸಹಾಯ ಮಾಡದೆ ಇದ್ದರೂ ಪರವಾಗಿಲ್ಲ ..ಆದರೆ ಜನ್ಮ ನೀಡಿದ ಅಪ್ಪ ಅಮ್ಮನನ್ನ ಪ್ರೀತಿಸಿ..ಅವರಿಗೆ .ಆಸರೆಯಾಗಿರಿ ..ಅವರೆ ನಮ್ಮ ಕಣ್ಣಮುಂದೆ ಇರುವ ಜೀವಂತ ದೇವರು .ಅವರಿಗೆ ನಮಿಸೋಣ..ನಾವು ಇಂದು ಕಾಗದ ಹಣವನ್ನು ಸಂಪಾದಿಸುವ ಭರದಲ್ಲಿ ಅಪ್ಪ ಅಮ್ಮನ ಪ್ರೀತಿ ವಾತ್ಸಾಲ್ಯದಿಂದ ದೂರವಾಗುತಿದ್ದೆವೆ ಅವರನ್ನು ಬಿಟ್ಟು ದೂರದ ಊರಿಗೆ ವಿದೇಶಕ್ಕೆ ಹೋಗುತಿದ್ದೇವೆ,ಓಮ್ಮ ಯೋಚಿಸಿ ಗೆಳೆಯರೆ .ನಮ್ಮನ್ನೂ ಬಾಲ್ಯದಲ್ಲಿ ಬಿಟ್ಟು ದೂರ ಹೋದರೆ ಆಗ ನಮಗೆ ಅಗುವ ನೋವು ಹೇಗೋ ಹಾಗೆಯೇ ಇದೂಕುಡ .ಆದರೆ ಜೀವನ ನೆಡೆಸಲು ಹಣ ಬೇಕು,ಆದರೆ ಹಣಗಳಿಸುವ ಭರದಲ್ಲಿ ಜೀವನ ಕೊಟ್ಟವರನ್ನು ಮರೆತು ಹೋಗಬಾರದು.ಹಣನಮ್ಮ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟೇ ಇರಬೇಕು ಅತೀ ಯಾವುದುಕೂಡ ಬೇಡ ಅತೀ ಅದರೆ ಅಮೃತ ಕೂಡ ವಿಷವಾಗುತ್ತದೆ.ಅದ್ದರಿಂದ ನಾವು ಸಂಬಂಧಗಳಿಗೆ ಬೆಲೆಕೋಡೋಣ ಈ ಮೂಲಕ ಮಾನವವೀಯತೆ ಮೆರೆಯೋಣ. ಮಾತೃದೇವೇಭವ ಪಿತೃದೇವೋಭವ ಎಂದು ಭಜೀಸಿ ಪೂಜಿಸುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗೋಣ🌺🙏🙏🙏🙏🙏🙏🙏🙏🙏🙏🌻
ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.! ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...! -ಮಿಥುನ್ ಜೈನ್
ಕಾಮೆಂಟ್‌ಗಳು