ನಾನು ಎಂಬ ಅಹಂ ಇಂದಿನ ಯುವ ಪೀಳಿಗೆ ಯಲ್ಲಿ ನಾವು ಹೆಚ್ಚಾಗಿ ಕಾಣುತ್ತೇವೆ ಏಕೆಂದರೆ ಎಷ್ಟೊಸಲ ಅದು ಅವರ ಅರಿವಿಗೆ ಬಾರದಂತೆ ಅವರ ರ್ತ ನೆಯಲ್ಲಿ .ನಮಗೆ ತೊರುತ್ತದೆ ಹೆಚ್ಚು ಓದಿದರು ಅವರಲ್ಲಿ ಹಿರಿಯರ ಬಗ್ಗೆ ಗೌರವವಿಲ್ಲ ಹಾಗೂ ತಾವೆ ಎಲ್ಲಾ ತಿಳಿದವರಂತೆ ವರ್ತಿಸುತ್ತಾರೆ .ಆದರೆ ಅನುಭವ ಕೊಡುವ ಶಿಕ್ಷ ಣ ಬೇರೆ ಯಾವ ವಿಶ್ವವಿದ್ಯಾಲಯ ಕೊಡಲು ಸಾಧ್ಯವಿಲ್ಲ... ಅದ್ದ ರಿಂದ ನಾವು ಎಷ್ಟೇ ಓದಿದ್ದ ರು ವಿಚಾರಗಳನ್ನು ತಿಳಿದಿದ್ದರೂ ನಮ್ಮಲ್ಲಿ ಸಹನೆ ಮತ್ತು ಹಿರಿಯರನ್ನು ಗೌರವಿಸುವ ಕೇಳುವ ಸ್ವಭಾವವನ್ನು ನಮ್ಮ ಯುವಜನತೆ ಸರಿಯಾಗಿ ಮನನ ಮಾಡಿಕೊಳ್ಳ ಬೇಕು ಈ ಮೂಲಕ ತಮ್ಮಲ್ಲಿ ಉತ್ತಮ ಮೌಲ್ಯಗಳನ್ನು ರೂಡಿಸಿಕೊಳ್ಳ ಬೇಕು ಈ ಮೂಲಕ ಸಮಾಜದಲ್ಲಿ ಯುವಜನತೆ ಮಾದರಿಯಾಗಿ ಬಾಳಬೇಕು. ಆದರೆ ಇವೆಲ್ಲವನ್ನು ಮರೆತು ನಾನೇ ಎಲ್ಲಾ ತಿಳಿದವ ಎಂದು ಅಹಂ ಭಾವದಿಂದ ವರ್ತಿಸ ಬೇಡಿ ಇದು ನಿಮ್ಮ ವ್ಯಕ್ತತ್ವವನ್ನು ಅಧೊಪತನಕ್ಕೆ ಇಳಿಸುತ್ತದೆ ಅಂದ್ದರಿ ನಾವು ಗೌರವವನ್ನು ಕೊಟ್ಟು ಗೌರವವನ್ನು ಪಡೆದು ಉತ್ತಮ್ಮ ಮತ್ತು ಆದರ್ಶ ವ್ಯ ಕ್ತಿಗಳಾಗಿ ಬಾಳೊಣ
ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.! ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...! -ಮಿಥುನ್ ಜೈನ್
ಕಾಮೆಂಟ್‌ಗಳು