ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕುಲುಮೆ ( ಹನಿಗವನ )

ಕುಲುಮೆ ( ಹನಿಗವನ )  ಅವಳೊಂದು       ಪ್ರೀತಿಯ..... ಚಿಲುಮೆ. ! ಅವಳಲ್ಲಿ      ನನಗ್ಯಾಕೋ..... ಒಲುಮೆ. ! ಮನಸ್ಸಾಗಿದೆ ಗೊಂದಲದ..... ಕುಲುಮೆ. ! Mj
ಇತ್ತೀಚಿನ ಪೋಸ್ಟ್‌ಗಳು

ಅವಳು ( ಹನಿಗವನ )

ಅವಳು ( ಹನಿಗವನ )   ರಂಬೆ ಊರ್ವಶಿಯರಿಗಿಂತ ಅಂದ. !  ಮೇನಕೆ ತ್ರಿಲೋತ್ತಮೆಯರಿಗಿಂತ ಚಂದ. ! ಹೋಗಲಾರಳಂತೆ   ನನ್ನೀ..... ಒಡಲಿನಿಂದ.....! Mj

ಕನ್ನಡ ನುಡಿ

 ಕೇಳುತ್ತಿದ್ದರೆ ಕನ್ನಡ ನುಡಿ ಮನದಲ್ಲಿ ಹೆಚ್ಚುವುದು ಹರುಷ  ಆಡುತ್ತಿದ್ದರೆ ಆ ಹೊನ್ನುಡಿ ಆಯಸ್ಸಿನಲಿ ಹೆಚ್ಚಿದಂತೆ ವರುಷ  ಸವಿ ಕನ್ನಡವದು ನನ್ನೆದೆಯ ಬೆಚ್ಚನೆಯ ಉಸಿರು  ಮನಕೆ ಆನಂದ ನೀಡುವ ಮೂರುವರೆಯಕ್ಷರದ ಹೆಸರು  ಕನ್ನಡವದು. ಮಾತೆಯ ಮಮತೆಯ ಮುಗುಳುನಗೆ  ಹರಸುವಳು ಕನ್ನಡಾಂಬೆ ನಮ್ಮೆಲ್ಲರನು ಹಲವು ಬಗೆ  ಹೆಚ್ಚಾಗಿದ್ದರೆ ನಮ್ಮ ನಡುವೆ ಕನ್ನಡ, ಭಾಷೆಯ ಬಳಕೆ  ಹಬ್ಬದ ಸಂತಸ, ಸಂಭ್ರಮ ಆಗುವುದೆಮ್ಮಯ ಮನಕೆ  ನನ್ನ ನಾಡು ಕರುನಾಡೆಂದು ಹೆಮ್ಮೆಯಿಂದ ಹೇಳುವೆ  ಸಾವಿರ ಜನುಮವಿದ್ದರು ಕನ್ನಡಿಗನಾಗಿಯೇ ನಾ ಬಾಳುವೆ                                                         ✍️*ಎನ್. ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಪತ್ತನಾಜೆ

ಪತ್ತನಾಜೆ.  ಬಂಡಿ ಬಲ್ಲ್ ಉಲಯಿ ದೀದ್ ಗುಂಡ ಗುಡಿ ಬಾಕಿಲ್ ಪಾಡ್ದ್ ಬೆನ್ನಿ ಬೇಲೆ ಸುರು ಆಂಡ್  ತುಳುನಾಡ ಪತ್ತನಾಜೆ.    ! ಪ ! ಜಾರ್ದೆ'ಡ್ದ್ ಬೇಸ ಮುಟ್ಟದ. ಇಡಿ ಒರ್ಸದ ಕೊಡಿತ ಪರ್ಬ ಮಾನಾಧಿಗೆದ ಈ ದಿನ  ತುಳುನಾಡ ಪತ್ತನಾಜೆ.  ! ಕಡ್ತಲೆ ಮೊಗ ಮಣೆಟ್ ದೀದ್ ಗೆಜ್ಜೆ ಗಗ್ಗರ ಬಿಚ್ಚ ದೀದ್  ಕೋಲ,ಆಯನದ ಕಡೆತ ದಿನ ತುಳುನಾಡ ಪತ್ತಾನಾಜೆ      ! ಪ ! ಬೇಸೊಡು ಪತ್ತು ಪೋಂಡು ಮರ್ಯಾಲ ಸುರು ಆಂಡ್ ಪತ್ತ್ ಪನಿ ಬರ್ಸದಾನಿ ತುಳುನಾಡ ಪತ್ತನಾಜೆ    ! ಕಟ್ಟಿನ ಕೋಲ ಕಡೆ ಆಪುಂಡು  ಜತ್ತಿನ ಆಟ ಪಿರ ಬರ್ಪುಂಡು ಗಾಂಡ್ ಗೌಜಿ ಕಮ್ಮಿ ಆಂಡ್ ತುಳುನಾಡ ಪತ್ತನಾಜೆ    ! ಪ ! ✍️ ಮಿಥುನ್ ಜೈನ್.

ಕನ್ನಡ ರಾಜ್ಯೋತ್ಸವ

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. 💛❤️ 🙏 ಕನ್ನಡವೆನಗೆ,   ಮಾತೆಯ ಮಮತೆಯ ಮಡಿಲಿನಂತೆ ❤️ ಕನ್ನಡವೆನಗೆ,   ಕಂದಮ್ಮನ ಕಲ್ಮಶವಿರದ ನಗುವಿನಂತೆ ❤️ ಕನ್ನಡವೆನಗೆ,   ಮಲೆನಾಡ ಕಾನನದ ತಂಗಾಳಿಯಂತೆ ❤️ ಕನ್ನಡವೆನಗೆ   ಹರೆಯದ ಹುಡುಗಿಯ  ಕಿರುನಗೆಯಂತೆ ❤️ ಕನ್ನಡವೆನಗೆ,   ಬೀಗರ ಭೋಜನದ ಮೃಷ್ಟಾಹ್ನದಂತೆ ❤️ ಕನ್ನಡವೆನಗೆ    ನೇಗಿಲ ಯೋಗಿಯ ನಿಟ್ಟುಸಿರಿನಂತೆ ❤️ ✍️MJ

ಅಮಾಯಕ ನೈಜ ಕಥೆ ( ಸಂಚಿಕೆ-೧೨)

ಮಗನನ್ನು ಕಳೆದುಕೊಂಡ ದುಃಖ್ಖ ಮತ್ತು ಅವನ  ಆ ಕ್ರೂರ ಸಾವಿಗೆ ಕಾರಣ ಅದವರ ಮೇಲಿನ ಕೋಪ ಇವೆರಡು ಸದಾ ಕಾಲ ಅವರ ಮನಸ್ಸನ್ನು ಕೊರೆಯುತಿತ್ತು.         ಹೀಗೆ ವರುಷಗಳು ಉರುಳುತಿದ್ದವು. ಮರುದೇವಿಯವರು ದೊಡ್ಡ ಮಗಳು ಸರಸ್ವತಿಯನ್ನು ಅಟ್ಲೊಟ್ಟು ಮನೆತನದ ಅನಂತಯ್ಯ ಹೆಗ್ಡೆಯವರಿಗೆ  ವಿವಾಹ ಮಾಡಿ ಕೊಟ್ಟರು. ಮರುವರ್ಷವೇ ಸಣ್ಣ ಮಗಳು ಸುನಂದಳನ್ನು ಆಕೆಯ ಹದಿನಾರನೇ ವಯಸ್ಸಿನಲ್ಲಿ ಬಂಗಾಡಿ ಎಂಬಲ್ಲಿಯ ಮೆಚ್ಚಿಲಗುತ್ತು ಮನೆಯ ದೊಡ್ಡ ಜಮೀನುದಾರ ನಾಗರಾಜ ಆರಿಗರಿಗೆ ವಿವಾಹ ಮಾಡಿಕೊಟ್ಟರು.  ನಾಗರಾಜ ಆರಿಗರಿಗೆ ಮೂರನೇ ಮದುವೆ ಮೊದಲೆರಡು ಹೆಂಡತಿಯರು ಮದುವೆಯಾಗಿ ಒಂದೇ ವರ್ಷದಲ್ಲಿ ಗರ್ಭಿಣಿಯರಾಗಿ ಪ್ರಸವ ಸಮಯದಲ್ಲಿ ತೀರಿಕೊಂಡಿದ್ದರು. ಮರುದೇವಿಯವರು, ದೇವರಾಜರ ಒತ್ತಾಯದ ಮೆರೆಗೆ ಈ ಮದುವೆಗೆ ಒಪ್ಪಿಕೊಂಡಿದ್ದರು.         ಕೇವಲ ಆಸ್ತಿ ಇದೆ ಎಂದು ಸುಂದರಿಯಾದ, ಹದಿನಾರರ ಹರೆಯದ, ಹುಡುಗಿಯನ್ನು ಮೂರನೇ ಮದುವೆ ಆಗುವ ವರನಿಗೆ ಕೊಡುತ್ತಿದ್ದಾರೆ ಎಂದು ಅವತ್ತು ಊರವರು ಮಾತನಾಡಿ ಕೊಳ್ಳುತ್ತಿದ್ದರಂತೆ. ಮದುವೆಯ ದಿನ ನೆರೆಯ ಮಹಿಳೆಯೊಬ್ಬಳು ಮಧು ಮಗಳನ್ನು ನೋಡಲು ಬಂದವಳು. " ಜೈನರು ಆಸ್ತಿಯೊಂದು ಇದ್ದರೆ, ಹುಲಿಗೂ ಹೆಣ್ಣು ಕೊಡುತ್ತಾರೆ" ಎಂದಿದ್ದಳಂತೆ. ಮುಂದೆ ಒಬ್ಬಂಟಿಯಾದ ಮರುದೇವಿಯವರು, ಅಳಿಯ ನಾಗರಾಜ ಅರಿಗರ ಒತ್ತಾಯಕ್ಕೆ ಮಣಿದು.  ಮಗಳ ಮನೆಯಾದ ಬಂಗಾಡಿಯ ಮೆಚ್ಚಿಲದಲ್ಲಿ...