ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಣಬೆಯೆಂಬ ಅಚ್ಚರಿ

ತರಗೆಲೆಯ ಮಧ್ಯೆ ಬುವಿಯಿಂದ ಮೇಲೆದ್ದು ಬಂಧು, ಶ್ವೇತ ರಾಣಿಯಂತೆ,, ಛತ್ರ ಚಾಮರದಂತೆ,, ಕಂಗೊಳಿಸುತಿಹ, ನಿನಗಾರು ಸಾಟಿ. ಎಲೆ ಅಣಬೆಯೆ ಅಣಕಿಸದಿರು, ನಿನಗಾರು,, ಸಾಟಿಯಿಲ್ಲವೆಂದು. !! ಚಪ್ಪರಿಸುವ, ಮನುಜಗೆ ಆಹಾರವಾದೆ, ಶಾಕಾಹಾರಿಗೆ ನೀ ದೂರವಾದೆ, ಉತ್ತದೆ ಬಿತ್ತದೆ ಬೆಳೆಯುವೆ ನೀನು, ಗುಡುಗು ಸಿಡಿಲಿಗೆ ಸೃಷ್ಟಿಯಾಗುವಿಯಂತೆ,, ಎಲೆ ಅಣಬೆಯೆ ಅಣಕಿಸದಿರು ನಿನಗಾರು,, ಸಾಟಿಯಿಲ್ಲವೆಂದು !! ಕರೆಯುವರು ನಿನ್ನ ನಾಯಿಕೊಡೆಯೆಂದು. ಯಾರು ನೋಡಿಲ್ಲ, ನಾಯಿ ಹಿ ಡಿದದ್ದು ಎಂದು. ಕೊಳೆತೆಲೆ ಬೈ ಹುಲ್ಲಲಿ ಹುಟ್ಟುವ ನೀ, ಹಸಿದವರ ಬಂದು. ಎಲೆ ಅಣಬೆಯೆ ಅಣಕಿಸದಿರು ನಿನಗಾರು,,, ಸಾಟಿಯಿಲ್ಲವೆಂದು !! ಸೃಷ್ಟಿಯ ಮಾಯಾವಿ ನೀನು, ಪ್ರಕೃತಿಯ ಸೊಬಗಿಗೆ ನಿನದೊಂದು ಕಾಣಿಕೆ, ಕರಗುವ ಮುನ್ನ ಬಿತ್ತರಿಸುವೆ ಈ ನಿನ್ನ, ಸೌಂದರ್ಯವನ್ನ, ಎಲೆ ಅಣಬೆಯೆ ಅಣಕಿಸದಿರು ನಿನಗಾರು,,,, ಸಾಟಿಯಿಲ್ಲವೆಂದು !! - ( ಮಿಥುನ್ ಜೈನ್ )

ನನ್ನವಳು 💃....

(ಸಂಗ್ರಹಿಸಿದ ಸಣ್ಣ ಕತೆಗೆ ಕವನ ರೂಪ ಕೊಟ್ಟಾಗ,) ನನ್ನವಳು ಹೇಳಿದಳು, ನನ್ನ ಬಳಿ. ! "ಐ.ಲವ್.ಯು"😍 ಹೇಳು, ನನಗೆ  ಪ್ರಪಂಚಕ್ಕೆ ಕೇಳುವಂತೆ,,,ಅಂತ.!! ನಾನು ಹೇಳಿದೆ, ಅವಳ  ಕಿವಿಯ ಬಳಿ  ! ಗುಟ್ಟಾಗಿ, ಐ.ಲವ್.ಯು ಅಂತ. !!      ಸ್ವಲ್ಪ ಮುನಿಸಿಕೊಂಡು ಕೇಳಿದಳು ನಾ ಹೇಳಿದ್ದೇನು,  ನೀ ಮಾಡಿದ್ದೇನು ಅಂತ ! ಅವಳಿಗೇನು ಗೊತ್ತು  ಪಾಪ,,, ಅವಳೆ, ನನ್ನ ಪ್ರಪಂಚ ಅಂತ. !!  😍😍😍😘😘😘☺️☺️☺️                      -(ಮಿಥುನ್ ಜೈನ್)

ಬತ್ತಿ ಹೋಗುವ ಮುನ್ನ...

ಬತ್ತಿ ಹೋಗುವ  ಮುನ್ನ, ಎಚ್ಚರಿಸಿಕೊ ನಿನ್ನ ಅಂತರಂಗವನ್ನ,     !!! ಬದುಕಿಸಿಕೋ  ಕೊನೆಯುಸಿರೆಳೆಯುವ ಮುನ್ನ, ತಾಯಿ,  ನೇತ್ರಾವತಿಯನ್ನ,   !! ತಟ್ಟಿ ಎಬ್ಬಿಸು ಮಂಪರಿನಲಿರುವ  ನಮ್ಮ ಜನನಾಯಕರುಗಳನ್ನ,   !! ಬತ್ತಿ ಹೋಗುವ  ಮುನ್ನ, ಎಚ್ಚರಿಸಿಕೊ ನಿನ್ನ ಅಂತರಂಗವನ್ನ,     !!! ರಕ್ಷಿಸುಕೊ  ಜಿಲ್ಲೆಯ ಅಂತರ್ಜಲದ ನರನಾಡಿಯನ್ನ,    !! ಹೊಡೆದೋಡಿಸು  ಎತ್ತಿನ ಹೊಳೆ  ಯೋಜನೆಯೆಂಬ, ಪೆಡಂಬೂತವನ್ನ,    !! ಬತ್ತಿ ಹೋಗುವ  ಮುನ್ನ ಎಚ್ಚರಿಸಿಕೊ ನಿನ್ನ ಅಂತರಂಗವನ್ನ,      !!!

ಆ ಒಂದು ನೆನಪು....

 images Soure- zeenews ಆತ್ಮೀಯ ಮಿತ್ರರೇ..... "ಹವ್ಯಾಸಿ ಓದುಗನ ಮಧ್ಯದಲ್ಲೊಬ್ಬ ಬರಹಗಾರ ಅವಿತಿರುತ್ತಾನಂತೆ".  ನಾನು ಬರಹಗಾರನು ಅಲ್ಲ ಹವ್ಯಾಸಿ ಓದುಗನು ಅಲ್ಲ,  ಆದರೂ... ನನ್ನ  ಹೈಸ್ಕೂಲು ಜೀವನದ ಮೊದಲ ವರ್ಷದ ನೆನಪುಗಳನ್ನು, ಅನೇಕ ವರ್ಷಗಳ ನಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ... ಯಾಕೆಂದರೆ ನನ್ನ ಹೈಸ್ಕೂಲಿನ ಮೊದಲ ವರ್ಷದಲ್ಲಿ ನಮ್ಮ ತರಗತಿಯಲ್ಲಿ ನಡೆದ ಘಟನೆಯೊಂದು, ಮೊಗ್ಗಿನ ಮನಸ್ಸು ಚಲನ ಚಿತ್ರದ ಕತೆಯ ಒಂದು ಘಟನೆಗೆ ಸ್ವಲ್ಲ ಮಟ್ಟಿಗೆ ಹೋಲಿಕೆಯಾಗುತ್ತದೆ. ಅದೇನೆಂದು ತಿಳಿಯಬೇಕಿದ್ದರೆ,  ಮುಂದೆ ಓದಿ.....       ನನಗಾಗ ಹದಿಮೂರರ ಹರೆಯ, ನಾನು ಓದಿದ್ದು, ಇತ್ತೀಚೆಗೆ ಶತಮಾನ ಕಂಡ ಪುತ್ತೂರಿನ ಪ್ರತಿಷ್ಠಿತ,  ಕ್ಷಮಿಸಿ,  ಪ್ರತಿಷ್ಠಿತ ಅಂದರೆ ಬೇರೆಯೇ ಅರ್ಥ ಬರುತ್ತದೆ.  ಪುತ್ತೂರಿನ ಪ್ರಸಿದ್ಧ ಬೋರ್ಡು ಹೈಸ್ಕೂಲಿನಲ್ಲಿ, ಅಥವ ಸರಕಾರಿ ಹೈಸ್ಕೂಲು ಅಥವ ಕೊಂಬೆಟ್ಟು ಹೈಸ್ಕೂಲು ಎಂದು ಹೇಳಬಹುದು.       ಏಳನೆಯ ತರಗತಿ ಮುಗಿಸಿ ರಜಾದಿನದಲ್ಲಿ ಎಂಟನೆಯ ತರಗತಿಗೆ ನನ್ನನ್ನು ದಾಖಲು ಮಾಡಲಾಯಿತು.  ಎಂಟನೆಯ ತರಗತಿಗೆ ಸಮವಸ್ರ್ತ ಖಾಕಿ ಪ್ಯಾಂಟ್ ಮತ್ತು ಬಿಳಿ ಅರ್ದ ತೋಳಿನ ಶರ್ಟ್ ಧರಿಸಿ ಉತ್ಸಾಹದಿಂದ ಹೋಗುತ್ತಿದ್ದೆ. ಅದೊಂದು ವಿಶಿಷ್ಟ ಅನುಭವ, ನಮ್ಮದು ಎಂಟನೆಯ ತರಗತಿಯಲ್ಲಿ ಆರು ವಿಭಾಗಗಳಿದ್ದವು. ಆರನೆಯ ವಿಭಾಗ 8 'ಎಫ...

ಪ್ರೀತಿ

ಸುಂದರ ಹುಡುಗಿಯ ಅಂದದ ಸೌಂದರ್ಯದ ಮಧ್ಯೆ,. ಕಳೆದು ಹೋದೆ ನಾನು. ಬರಿದಾದ ಹೃದಯದಲಿ ಬೆಚ್ಚಗೆ ಮುಚ್ಚಿಟ್ಟು ಮೆತ್ತಗೆ ಕಾವು ಕೊಟ್ಟು   ಪೊರೆಯುವ ದೊಡ್ಡದೊಂದು ಆಸೆ. ಆಸೆಗೆ ಕೊನೆಯಿಲ್ಲ ಪ್ರೇಮಕ್ಕೆ ಅಂತ್ಯವಿಲ್ಲ. ಪ್ರೀತಿಯೆಂಬ ಮಾಯೆಯ ಬಳಿ, ಕಳೆದು ಹೋದೆ ನಾನು. ಮತ್ತೆ ಹುಡುಕಲಾರಿರಿ ನೀವು. ಸವಿ ಮಾತು, ಕುಡಿ ನೋಟ, ಸುಂದರ ಹೃದಯಗಳ ಸಮ್ಮಿಲನ, ಪ್ರೀತಿಸುವ ಹೃದಯಲಿ ಜಾಗವಿದೆಯೊ ಹರಸಿ ಹಾರೈಸುವ ಕೈಗಳು, ಕಟ್ಟಿ ನಿಂತಿವೆಯೊ, ಕಾದು ನೋಡುವೆನು ಕಾಲನ ಮುಂದೆ                                 ( ಮಿಥುನ್ ಜೈನ್)