ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕುಲುಮೆ ( ಹನಿಗವನ )

ಕುಲುಮೆ ( ಹನಿಗವನ )  ಅವಳೊಂದು       ಪ್ರೀತಿಯ..... ಚಿಲುಮೆ. ! ಅವಳಲ್ಲಿ      ನನಗ್ಯಾಕೋ..... ಒಲುಮೆ. ! ಮನಸ್ಸಾಗಿದೆ ಗೊಂದಲದ..... ಕುಲುಮೆ. ! Mj

ಅವಳು ( ಹನಿಗವನ )

ಅವಳು ( ಹನಿಗವನ )   ರಂಬೆ ಊರ್ವಶಿಯರಿಗಿಂತ ಅಂದ. !  ಮೇನಕೆ ತ್ರಿಲೋತ್ತಮೆಯರಿಗಿಂತ ಚಂದ. ! ಹೋಗಲಾರಳಂತೆ   ನನ್ನೀ..... ಒಡಲಿನಿಂದ.....! Mj

ಕನ್ನಡ ನುಡಿ

 ಕೇಳುತ್ತಿದ್ದರೆ ಕನ್ನಡ ನುಡಿ ಮನದಲ್ಲಿ ಹೆಚ್ಚುವುದು ಹರುಷ  ಆಡುತ್ತಿದ್ದರೆ ಆ ಹೊನ್ನುಡಿ ಆಯಸ್ಸಿನಲಿ ಹೆಚ್ಚಿದಂತೆ ವರುಷ  ಸವಿ ಕನ್ನಡವದು ನನ್ನೆದೆಯ ಬೆಚ್ಚನೆಯ ಉಸಿರು  ಮನಕೆ ಆನಂದ ನೀಡುವ ಮೂರುವರೆಯಕ್ಷರದ ಹೆಸರು  ಕನ್ನಡವದು. ಮಾತೆಯ ಮಮತೆಯ ಮುಗುಳುನಗೆ  ಹರಸುವಳು ಕನ್ನಡಾಂಬೆ ನಮ್ಮೆಲ್ಲರನು ಹಲವು ಬಗೆ  ಹೆಚ್ಚಾಗಿದ್ದರೆ ನಮ್ಮ ನಡುವೆ ಕನ್ನಡ, ಭಾಷೆಯ ಬಳಕೆ  ಹಬ್ಬದ ಸಂತಸ, ಸಂಭ್ರಮ ಆಗುವುದೆಮ್ಮಯ ಮನಕೆ  ನನ್ನ ನಾಡು ಕರುನಾಡೆಂದು ಹೆಮ್ಮೆಯಿಂದ ಹೇಳುವೆ  ಸಾವಿರ ಜನುಮವಿದ್ದರು ಕನ್ನಡಿಗನಾಗಿಯೇ ನಾ ಬಾಳುವೆ                                                         ✍️*ಎನ್. ಮಿಥುನ್ ಜೈನ್