ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿ"ಚಿತ್ರ"

ಚಿತ್ರವಿದು ವಿ"ಚಿತ್ರ"ವಾಗಿದೆ !  ಅರ್ಥೈಸಲು ಮನ ಸೋತಿದೆ ! ಆಕೃತಿ ಇದು ಚಿತ್ತ ಕಲುಕಿದೆ ! ವಿಕೃತಿ ಇಲ್ಲಿ ಮೇಳೈಸುತ್ತಿದೆ ! ಸಂಸೃತಿಯು ಕಳೆದು ಹೋಗಿದೆ ! ಪ್ರಕೃತಿಯು ಪಾಠ ಕಲಿಸಿದೆ !  ಕಪಟಿ ಮನುಜರ ಚಿತ್ತವೆಲ್ಲಿದೆ !  ನೆಮ್ಮದಿಯು ಮರೀಚಿಕೆಯಾಗಿದೆ !  ಕಷ್ಟವೆಂಬುದು ಮಾಮೂಲಾಗಿದೆ !  ದುಷ್ಟ ಶಿಷ್ಟರ ಜೊತೆಗೆ ಸಾಗಿದೆ !  ಲೋಭಿತನವು ಮೀರಿ ಹೋಗಿದೆ ಅಲ್ಪ ತನವು ಮೈಗೂಡಿದೆ !  ಧರಣಿಯೆಲ್ಲ ದುರ್ಜನರದಾಗಿದೆ !  ಕೊನೆಗು ಭೂತಾಯಿ ಮುನಿದಿದೆ !  ನಮ್ಮ ತಪ್ಪಿನ ಅರಿವಾಗಿದೆ !  ಆದರೆ, ಕಾಲ ಮೀರಿ ಹೋಗಿದೆ !                                                                          ✍️ಎನ್. ಮಿಥುನ್ ಜೈನ್.

ಪುತ್ತೂರು ಜಾತ್ರೆ

©https://m.facebook.com/shreemahalingeshwaratempleputtur/photos/pcb ಪುತ್ತೂರಿನ ಜಾತ್ರೆಯಲ್ಲಿ,,  ಶಿವನ ಸನ್ನಿಧಾನದಲ್ಲಿ,,  ವರುಷವು ವರುಷವು. ಜನರಿಗೆಲ್ಲ ಹರುಷವು  !!  ಯುಗಾದಿಯ ನಂತರದಲಿ  ಸಂಕ್ರಮಣವು ಅಂತರದಲಿ  ! ದೀಪೋತ್ಸವ,,  ತೆಪ್ಪೋತ್ಸವ,,   ಕಟ್ಟೆ ಪೂಜೆ,,  ರಥೋತ್ಸವ,, ! ಗುಡಿಗಳ   ಅಲಂಕಾರ  ರಂಗೋಲಿಯ ಚಿತ್ತಾರ   !  ವಾಲಗದ ಝೇಂಕಾರ   ತೋರಣಗಳ ಸಿಂಗಾರ    ! ಅನುದಿನವು ಸಂಭ್ರಮದ  ಪೇಟೆ ಸವಾರಿಯು,, ! ದಿನ ದಿನವು ವೈಭವದ  ಕಟ್ಟೆ ಪೂಜೆಯು ! ಪುತ್ತೂರಿನ ಜಾತ್ರೆಯಲ್ಲಿ  ಶಿವನ ಸನ್ನಿಧಾನದಲ್ಲಿ  ವರುಷವು ವರುಷವು  ಜನರಿಗೆಲ್ಲ ಹರುಷವು !!  ಬಲ್ನಾಡಿನ ಉಳ್ಳಾಲ್ತಿಯು  ಭಂಡಾರದ ಜೊತೆಯಲ್ಲಿ  ಪರ ಶಿವನ ಆಲಯದಿ   ಸಂಭ್ರಮದ  ಭೇಟಿಯು,,! ಊರಿನ... ಪರ ಊರಿನ..   ಭಕ್ತರೆಲ್ಲ ಸಾಕ್ಷಿಯು. ! ಕಲ್ಯಾಣಿ ಸುತ್ತ ದೀಪ ಹಚ್ಚಿ  ತೆಪ್ಪದಲ್ಲಿ ಸಾಗಿ ಹೋಗಿ. ಕೆರೆ ಕಟ್ಟೆ  ಪೂಜೆಯು  ಚಂದ್ರ ಮಂಡಲ ಸೇವೆಯು ! ಪುತ್ತೂರಿನ ಜಾತ್ರೆಯಲ್ಲಿ  ಶಿವನ ಸನ್ನಿಧಾನದಲ್ಲಿ  ವರುಷವು ವರುಷವು  ಜನರಿಗೆಲ್ಲ ಹರುಷವು !! ನವದಿನಗಳ ಜಾತ್ರೆಯು  ಜನ ಜಂಗುಳಿ ಸಂತೆಯು ! ದರ್ಶನ ಬಲಿ ಉತ್ಸವ ...