ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರೀ ಕೃಷ್ಣ

ಕಲಿಯುಗದ ಮಾಯಾವಿ ಶ್ರೀ ಕೃಷ್ಣನೇ... ಭಕ್ತರಾ ಪೊರೆವ  ಭಗವಂತನೆ..... (೧) ನಿನ್ನ  ಸಂದೇಶ  ನೋಡುವೆವು ಗೀತೆಯಲಿ ! ಭಜಿಸುವೆವು ನಾವೆಲ್ಲ ನಿನ್ನನ್ನೆ ಭಕ್ತಿಯಲಿ ! ರಾದೆಯ ಮನದರಸ ಮಾದವನು ನೀನು ! ಹೆಂಗೆಳೆಯರೆಲ್ಲರ ಹೃದಯ ಚೋರನು ನೀನು ! ಕಲಿಯುಗದ ಮಾಯಾವಿ ಶ್ರೀ ಕೃಷ್ಣನೇ.... ಭಕ್ತರಾ ಪೊರೆವ  ಭಗವಂತನೇ.....(೨) ಕಾಳಿಂಗ ಮರ್ದನದಿ ನೀಲ ವರ್ಣನು ನೀನು ! ಕುಚೇಲನ ಸ್ನೇಹದಲಿ ಶ್ವೇತ ವರ್ಣನು ನೀನು ! ಕಾಮಧೇನ ಕಾಯುವ ಗೋ ಪಾಲಕನು ನೀನು ! ನೊಂದವರ ಪಾಲಿಗೆ ಸಂಜೀವಿನಿ ನೀನು ! ಕಲಿಯುಗದ ಮಾಯಾವಿ ಶ್ರೀ ಕೃಷ್ಣನೇ.... ಭಕ್ತರಾ ಪೊರೆವ ಭಗವಂತನೇ.....(೩) ✍️ ಮಿಥುನ್ ಜೈನ್

ಒಂದು ಸುಂದರ ಕಲೆ !

ಕಾಯಕದಿ ಕಾಣುತಿದೆ ಒಂದು ಸುಂದರ ಕಲೆ ! ಕಟ್ಟಲಾಗದು ಎಂದಿಗು ಅದಕ್ಕೊಂದು ಬೆಲೆ   !೧! ಮುದ್ದು ಗೊಂಬೆಯು  ಇದು ಶಿಲ್ಪಿಯಾ ಕೈಚಳಕ ! ಅದ ನೋಡಿದವರ ಮೈ ಮನವು ಪುಳಕ ! ನೀಲ ಜಡೆಯಲಿ ಕಂಗೊಳಿಸುತಿಹ ಲಲನೆ ! ನಿನ್ನ ಸೌಂದರ್ಯಕೆ  ನಾ ಸೋತು ಶರಣಾದೆನೆ ! ಕಾಯಕದಿ ಕಾಣುತಿದೆ ಒಂದು ಸುಂದರ ಕಲೆ! ಕಟ್ಟಲಾಗದು ಎಂದಿಗು ಅದಕ್ಕೊಂದು ಬೆಲೆ  !೨! ಆರ ನೋಡುವಿ ನೀನು  ಕದ ತೆರೆದು ಇಣುಕಿ ! ನೋಡುಗನ ಮನದ ರಸಿಕತೆಯ ಕೆಣಕಿ ! ಕರೆಯುವೆಯ ನಿನ್ನ  ಮನೆಯೊಳಗೆ ನನ್ನ ! ತುಸು ಜಾಗ ಮಾಡಿಕೊಡು ಮನದೊಳಗೆ ಚಿನ್ನ ! ಕಾಯಕದಿ ಕಾಣುತಿದೆ ಒಂದು ಸುಂದರ ಕಲೆ ! ಕಟ್ಟಲಾಗದು ಎಂದಿಗು ಅದಕ್ಕೊಂದು ಬೆಲೆ  !೩!                   ✍️ ಮಿಥುನ್ ಜೈನ್

ಮನುಜ ಮತ್ತು ಪ್ರಕೃತಿ

ಬದುಕೊಂದು ಮೂರು ದಿನಗಳ ಸಂತೆ  ! ಅಲ್ಲಿರುವುದು  ಕಷ್ಟ ಸುಖಗಳ ಚಿಂತೆ   !! ಬಿರು ಬೇಸಿಗೆಯಲಿ ನೀರಿಲ್ಲದೆ ಪರದಾಟ ! ಭಾರಿ ಮಳೆಯಲಿ ನೆರೆಗೆ ತತ್ತರಿಸಿ ಅರಚಾಟ. !! ಮಿತಿ ಮೀರಿದಾಗ ಮನುಜನ ವಿಕೃತಿಯು ! ಮುನಿಯುವುದು ಸುಂದರ ಪ್ರಕೃತಿಯು  !! ಬದುಕೊಂದು ಮೂರು ದಿನಗಳ ಸಂತೆ ! ಅಲ್ಲಿರುವುದು ಕಷ್ಟ ಸುಖಗಳ ಚಿಂತೆ  !! ತಪ್ಪೆಸಗಿಲ್ಲದ ಮೂಗ ಪ್ರಾಣೆಗಳು, ! ತೆಪ್ಪಗೆ ಬದುಕುತಿಹ ಕಾಡು ಜೀವಿಗಳು,  !! ಪ್ರಕೃತಿ ನೇಸರನ ಮಧ್ಯೆ ಸಂಘರ್ಷವೊ ವಿರಸವೊ ! ಇಳೆಗೆ, ಮುಗಿಲ ಮೋಡದ ಬಿರುಸಾದ ಸ್ಪರ್ಶವೊ  !! ಬದುಕೊಂದು ಮೂರು ದಿನಗಳ ಸಂತೆ ! ಅಲ್ಲಿರುವುದು ಕಷ್ಟ ಸುಖಗಳ ಚಿಂತೆ  !! ನದಿ, ಕೆರೆ, ತೊರೆಗಳ ಅಕ್ರಮಿಸದಿರು ಮನುಜ ! ಮತ್ತೆ ನೆರೆ ಬಂದಾಗ ಅತಂತ್ರವಾಗುವುದು ಸಹಜ  !! ಭಾರಿ ಯಂತ್ರಗಳ ಅತಿಯಾಗಿ ಬಳಸದಿರು ! ಜೀವನದ ನೆಮ್ಮದಿಯ ಹಾಳು ಮಾಡದಿರು  !! ಬದುಕೊಂದು ಮೂರು ದಿನಗಳ ಸಂತೆ ! ಅಲ್ಲಿರುವುದು ಕಷ್ಟ ಸುಖಗಳ ಚಿಂತೆ  !!                             ✍️ ಎನ್. ಮಿಥುನ್ ಜೈನ್