ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಂದನಂತೆ ಕಾಣುವೆ

  ಓ ನನ್ನ ಪ್ರೀಯ ನಲ್ಲೆ  ಅಂದ ಚಂದ ನಿನ್ನಲ್ಲೇ  ಬಂದಿಯಾಗಿದೆಯಲ್ಲೇ  ಬಂದು ನೆಲೆಸು ನನ್ನಲ್ಲೇ   ಕಂದನಂತೆ ಕಾಣುವೆ !   ಹಣೆಮದ್ಯೆ ಬೊಟ್ಟಿಡುವೆ   ಬೈ ತಲೆಗೆ ಮುತ್ತಿಡುವೆ   ಬಳಲಿದರೆ ಎತ್ತಿಡುವೆ   ತುಟಿಗಳಿಗೆ ತುತ್ತಿಡುವೆ   ಕಂದನಂತೆ ಕಾಣುವೆ !   ಮಾತೃತ್ವದ ಹೆಂಗರುಳು  ಮೃದು ಮನದ ಹೂ ಎಸಳು   ಬಾಳ ಬದುಕಿಗೆ ನೆರಳು   ಪಿಡಿದು ಕೈಯ ಬೆರಳು   ಕಂದನಂತೆ ಕಾಣುವೆ !  ಗೃಹದ ಕೆಲಸ, ಆಡಿ ಮುಗುಸಿ   ಉಳಿದದನ್ನು ಬದಿಗೆ ಸರಿಸಿ  ತನುವ ಮನಕೆ ವಿಶ್ರಾಂತಿ ಬಯಸಿ   ಬಳಿಗೆ ಬರಲು ಮಡಿಲ ಅರಸಿ   ಕಂದನಂತೆ ಕಾಣುವೆ !   ನಾ ಬರೀ ಇನಿಯನಲ್ಲ.  ಹೃದಯ ಕೊಟ್ಟಿರುವ ನಲ್ಲ  ಮಾತು ಕೊಡುವೆನು ಸಖಿಯೇ   ಮಾತೆಯಂತಿರುವೆ ನಾ ನಿನಗೆ   ಕಂದನಂತೆ ಕಾಣುವೆ !                                                     © ✍️ಮಿಥುನ್ ಜೈನ್ .

ಜನ ನಾಯಕರು

                              ‌‌       (ಚಿತ್ರ ಕೃಪೆ :ಜಾಲತಾಣ) ಜನ "ನಾಯಕ"ರು   (ಪಂಚಾಯತ್ ಚುನಾವಣೆ ಹೊಸ್ತಿಲಿನಲ್ಲೊಂದು ವಾತ್ಸವ ನೆನಪಿಸುವ ಸಣ್ಣ ಪ್ರಯತ್ನ .)  ನಾಯಕರಣ್ಣ ನಾಯಕರು  ಜನ ನಾಯಕರು. !  ಭಾವನೆಗಳನು ಸಮಾಜದಲ್ಲಿ  ತೇಲಿಬಿಟ್ಟವರು !!  ಭರವಸೆಗಳಳ ಬುತ್ತಿಯನೆ  ಬಗೆದು ಕೊಟ್ಟವರು. !  ನಾವುಗಳದನು  ನಂಬಿ ಕೆಟ್ಟವರು. !!  ಮತ ಕೇಳಲು ಕರ ಜೋಡಿಸಿ  ತಲೆ ತಗ್ಗಿಸುವರು !  ಗೆದ್ದರೆ , ಕೈ ಎತ್ತಿ  ಎದೆಯಯ ಹಿಗ್ಗಿಸುವರು !!  ಗೆದ್ದಾಗ ಹೆಜ್ಜೆಗೊಂದು  ಹಿಂಬಾಲಕರು !  ಸೋತಾಗ ಜೊತೆಗಿರುವವರೇ  ನಿಜ ಪಾಲಕರು !!  ಮತದಾನದ ಹೊಸ್ತಿಲಲಿ  ಪ್ರಜೆಯೇ ನಾಯಕ !  ಚುನಾವಣೆ ನಂತರದಲಿ  ಅವನು ಅಮಾಯಕ !!  ಬಲಿಯಾಗುವರು ಇವರಿಗೆ   ಅನೇಕರು !  ಬುದ್ದಿ ವಿವೇಚನೆಗಳ  ಒತ್ತೆ ಇಟ್ಟವರು !!  ಜನ ನಾಯಕರುಗಳ   ಅಭಿಮಾನಿಗಳಾಗದಿರಿ !  ವಿಚಾರಧಾರೆಗಳ   ವಿಮರ್ಶಕರಾಗಿರಿ. !!                         ...