ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವರ್ಣಭೇದದ ವಿರುದ್ಧ ಬಂಡಾಯ

'ವರ್ಣಭೇದ' ವೆಂಬುವುದು  ಮಹಾಪಾಪ   ! ಇದು ಮನುಕುಲಕ್ಕೆ ಅಂಟಿದ  ದೊಡ್ಡ  ಶಾಪ ! ಈಗಲೂ ಕಡಿಮೆಯಾಗಿಲ್ಲ  ಅದರ ತಾಪ  ! ಅದಕ್ಕಾಗಿ ಪಡಬೇಕು  ಎಲ್ಲರು ಪಶ್ಚಾತಾಪ  ! ಇತಿಹಾಸದಲ್ಲಿ ನಡೆದಿದೆ  ಅನೇಕ ಯುದ್ಧ  !  'ಅಸಮಾನತೆ' ಎಂಬ  ಪಿಡುಗಿನ ವಿರುದ್ಧ ! ದೌರ್ಜನ್ಯಕ್ಕೆ ಇರಲೇ ಇಲ್ಲ  ಇತಿ ಮಿತಿ   ! ತಿರುಗಿ ನಿಂತರೆ ಅವರಿಗೆ  ಸಾವೆ ಗತಿ   ! ಕಪ್ಪು ಜನರು ಎಲ್ಲರಿಗಾಗಿ  ದುಡಿದರು  !  ದೌರ್ಜನ್ಯಕೆ ಮುಕ್ತಿ ಇಲ್ಲದೆ  ಮಡಿದರು ! ಅಸಮಾನತೆ ತೊಲಗಿಸಲು  ಗಾಂಧಿ ಪಣ ತೊಟ್ಟರು ! ಸಮಾನತೆಗಾಗಿ ಭೀಮರಾವ್  ಶ್ರಮ ಪಟ್ಟರು !    !ಪ !                   ✍️  Mj

ಸಲ್ಲಾಪ

🕺ಪ್ರಿಯಕರ  :-  'ಬಿಳಿಯುಡುಪಿನ ಬೆಡಗಿಯೇ,,  ಇಳೆಯ ಸೌಂದರ್ಯದ ಜೊತೆ ಬೆರೆತಾಗ, ಕಲೆತಾಗ,  ಬರುವುದು,   ಅದಕ್ಕೊಂದು ಬೆಲೆ,,,  "ಅಂದ"ಕ್ಕೊಂದು,,, ನೆಲೆ,,  ಆದರೆ,,,😞  ಕಳೆದೋಗಿದೆ ಎನ್ನಯ ಮನ. ಕೇಳು ಸಖಿ ನನ್ನಂತರಂಗವನ್ನ...  💃ಪ್ರಿಯತಮೆ  :- "ಗೆಳೆಯಾ...  "ಕೆಳೆದೋಗದಂತೆ ಜೋಪಾನವಾಗಿರಿಸಿಕೊಳ್ಳೋ ಕಲೆ, ನಿನ್ನಲ್ಲೇ ಇದೆ" 🕺ಪ್ರಿಯಕರ   :-    "ಅರಿಯದಾದೆನು ಇದರ ತಾತ್ಪರ್ಯವನು. ! ಹೇಗೆ ಅರಿಯಲಿ ಸಖಿ.. ಮನದಿಚ್ಚೆಯ ಪರಿಧಿಯನು, ! ಹೇಗೆ ಅರಿಯಲಿ ನಾ...... ! ಹೇಗೆ ಅಳೆಯಲಿ ನಾ......! ನೀರಿಲ್ಲಿರೋ ಮೀನ ಹೆಜ್ಜೆಯನು. ಒಗಟಿನಂತಿದೆ ಸಖಿ ನಿನ್ನೀ ಮಾತು ! ಯೋಚಿಸುತಿರುವೆನು ಅರ್ಥೈಸಿಕೊಳ್ಳಲು ಸೋತು !" 💃ಪ್ರಿಯತಮೆ  :- "ಪದೇ ಪದೇ ಸೋಲಬಾರದು ಗೆಳೆಯ...  🕺ಪ್ರಿಯಕರ  :- "ಸೋಲುತ್ತಿರುವುದು ಯಾರು ಗೆಳತಿ .. 💃ಪ್ರಿಯತಮೆ  :-  (ಮೌನ) 🕺ಪ್ರಿಯಕರ  :- "ಪ್ರಯತ್ನಕ್ಕೆ ಪಲಿಸದ್ದು ಯಾವುದಿದೆ ಗೆಳತಿ ಈ ಜಗದಲ್ಲಿ...?   ! ಮಧುರತೆಯೇ ತುಂಬಿರುವುದು ನನ್ನೀ ಮನದಲ್ಲಿ.... ! 💃ಪ್ರಿಯತಮೆ  :- "ವ್ಯರ್ಥ ಪ್ರಯತ್ನವೇಕೆ  ?  ಮತ್ತೆ ಕಾಲಹರಣವೇಕೆ ?  ನಿಮ್ಮ ಮಧುರತೆಯ ಮನಕೆ ನನ್ನದೊಂದು ನಮನ " (ಅಡ್ಡ ಗೋಡೆಯ ಮೇಲೆ ದೀಪವಿಟ್ಟಳಾಕೆ.) ಕೊನೆಗೂ ಅರಿತು ಬಿಟ್ಟನು...

ಬಾಳೆಂಬ ಕಡಲಲ್ಲಿ

ಬಾಳೆಂಬ ಕಡಲಲ್ಲಿ   ಈಜಾಡಿ ಬಸವಳಿದು ! ಬದುಕ ಬವಣೆಯನು   ಎದುರಿಸುತಲಿರುವೆವು ! ಬಾಡಿಗೆಯ ಮನೆಯಂತೆ   ಸ್ಥಿರವಲ್ಲವೀಬದುಕು ! ಬಡವ ಧನಿಕನೆಂಬ ಭೇದ    ಬರೀ ಕಾಂಚಾಣದಲ್ಲಿ ! ದೇಹಾತ್ಮವೆಂಬ ಸತ್ಯವು   ಪ್ರೇತಾತ್ಮವೆಂಬ ಮಿಥ್ಯವು ! ಸೃಷ್ಟಿಯೇ ಭಗವಂತನೆಂಬ ಇದುವೆ ವಾತ್ಸವವು ! ಮೂರು ದಿನದ ಬದುಕಿನಲಾರು    ನಮ್ಮವರೆಂದು ! ನೆರೆಯವರೊ  ನೆಂಟರೊ   ಬಂದುಗಳೊ ಬಂಟರೊ !  ತಿಳಿಯದಾದೆನು ಈ ನಿಮ್ಮ...  "ಒಂಟಿ ನಾವಿಕ"ನು !                       ✒️ Mj