ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಕೃತಿ (ಪ್ರತಿ, ಕೃತಿ, ಸತಿ, ರತಿ)

ಸೂರ್ಯೋದಯದ ಹೊತ್ತ  ಮುಂಜಾನೆಯ  ಕಿರಣಗಳತ್ತ  ನೋಡಿದೆನು ಆಗಸದ ಸುತ್ತ  ಹಕ್ಕಿಗಳ ಕಲರವನು ಕೇಳುತ್ತ  !  ಬರೆಯಲೇ ನಾ ಕವಿತೆಯೊಂದ  ಪದಗಳನು ಎರವಲು ಪಡೆದು..  ಬಳುಕುವ ಹಸಿರುಡುಪಿನ   ಬಳ್ಳಿಗಾಗಿ.....   !!  ನೋಟದಿ  ಪ್ರೇಮಭಾಣವನು ಭಾವನೆಗಳ ಬತ್ತಳಿಕೆಯಿಂದ. ಬಣ್ಣದಂಚಿನ ಸೀರೆಯ  ಬೆಡಗಿಗಾಗಿ,,,      !! ಬಣ್ಣಿಸಲೇ ಮಾಧುರ್ಯದಿಂದ,  ವಿಶ್ವಾಸದ ಪಣತೊಟ್ಟು. ಮಧುರತೆ ತುಂಬಿದ  ಮಾನಿನಿಗಾಗಿ,,,,       !! ಬಡಿಸುವೆನು ಕಾವ್ಯರಸದೌತಣವ ತುಸು ನಾಚಿಕೆಯ ಬದಿಗಿಟ್ಟು   ಸುವರ್ಣಲತೆಯಂತಿರುವ ಲಲನೆಗಾಗಿ,,,,       !! ಭಾಸ್ಕರನು ವಿರಮಿಸುವತ್ತ  ದಿಗಂತದಲಿ ಸರಿಯುತ  ಅಸ್ತಮಾನದ ಹೊತ್ತ.  ಹೊರಟವು ಹಕ್ಕಿಗಳು ಗೂಡಿನತ್ತ ! ✍️ ಮಿಥುನ್ ಜೈನ್ (ಚಿತ್ರ ಕೃಪೆ : ಅಂತರ್ಜಾಲ)