ಓ ಕಾಮದೇನುವೇ ಬಂದೆಯಂತೆ ಬುವಿಗೆ ಕಲ್ಪವೃಕ್ಷ ಪಾರಿಜಾತದ ಜೊತೆಗೆ ! ಓ ನಂದಿನಿಯೇ ಹಾಲೆಂಬ ಅಮೃತವ ಕೊಟ್ಟೆ ಅದರಲ್ಲಿ ರುಚಿಯನ್ನು ಇಟ್ಟೆ ! ಓ ಗೋ ಮಾತೆಯೇ ಮನುಜನಿಗೆ ಹಾಲುಣಿಸಿ ಎರಡನೆಯ ತಾಯಿಯಾದೆ ! ಓ ಮೂಗ ದೇವತೆಯೇ ಕೃಷಿ ತ್ಯಾಜ್ಯತಿಂದೇ ಮತ್ತೆ ಗೊಬ್ಬರವ ಕೊಟ್ಟೆ ! ಓ ತಾಯಿ ಯೇ ನಿನ್ನುಪಯೋಗವೆಲ್ಲವನು ಪಡೆದವನೆ ಮಾರಿದ ಕಸಾಯಿಗೆ ! ✍️ MJ
#Ontinavika ಒಂಟಿ ನಾವಿಕ | #ಕನ್ನಡ • #ತುಳು ಸಾಹಿತ್ಯ #poems #stories #books #kannada #tulu