ಭಾವಚಿತ್ರದಲಿರುವಾಕೆಯ ನೋಡುತಿರೆ, ಭಾಹುಗಳಲಿ ಬಂಧಿಸಲು ಬಯಸಿ, ಭಾವನೆಗಳ ಸಂಕಲೆಯು ಕಡಿದು, ಬೆಡಗಿಯೆದುರು ನಿಂತಾಗ, ನನ್ನೆದೆ,ಬಡಿತದ ಶಬ್ದ ಸ್ಪಷ್ಟವಾಗಿತ್ತು ವೇಗವಾಗಿ... ತುಟಿಯಂಚಲಿ ಪಿಸುಮಾತೊಂದ ಹೊರಟಿತು, "ಐ ಲವ್ ಯು" ಎಂದು. ಆ ಮಾತಾಕೆಯ ಕಿವಿ ತಲುಪಿತೊ ನಾನರಿಯದಾದೆನು, ನಾಚಿ ನೀರಾದಳು ಹುಡುಗಿ ನಾನಾಡಿದ ಮಾತಿಗೊ ನಾ ನೋಡಿದ ನೋಟಕೊ ಎಂದರಿಯಲಿಲ್ಲ ನಾನು. ನಿಂತ ನೆಲವ ನೋಡುತಲಿ, ಹೆಬ್ಬೆರಳಲಿ ನೆಲ ಕೊರೆಯುತ, ಅದುರುತಿರುವ ತುಟಿಯಂಚು ನೋಡಲು, ಮೆಲ್ಲನೆ ಏನೋ ಪಿಸುಗುಟ್ಟಿದಂತೆ, ಸರಸರನೆ ಓಡಿದಳಾಕೆಯರ(ಮನೆಯ) ಕಡೆ, ಆ ಕಡೆಯೇ ನನ್ನ ಕಾಲ ಪಾದಗಳೆಳೆಯಲು, ಬಲವಂತವಾಗಿ ತಿರುಗಿಸಿದೆನು ನನ್ನ ಮನೆಯ ಕಡೆ. ಮೌನದ ಸಮ್ಮತಿಯೆಂದರಿತ ನನಗೆ ಸ್ವರ್ಗಕೆ ಮೂರೆ ಗೇಣು, ಮನದಲಿ ಮಂಡಿಗೆಯನು ತಿನ್ನುವವನಂತೆ, ನಾಚಿದ ಕೋಮಲೆಯ ನೆನೆಯುತಿರಲು, ಸಾವಿರ ಹೊಂಗನಸ ಕಟ್ಟುತಿರಲು,,, ತಿಂಗಳುಗಳುರುಳುತಿರಲು ಋತುಗಳು ಮುಗಿಯುತಿರಲು ಕಿವಿಗಪ್ಪಳಿಸಿತೊಂದು ಸುದ್ಧಿ ನನ್ನ ಮನದರಸಿಗೆ ಮಧುವೆಯಂತೆ ಹುಡುಗ ಸಾಹುಕಾರ ಮಗನಂತೆ, ಮುಂದೆ................. ...
#Ontinavika ಒಂಟಿ ನಾವಿಕ | #ಕನ್ನಡ • #ತುಳು ಸಾಹಿತ್ಯ #poems #stories #books #kannada #tulu